ರೂ.1 ಕೋಟಿ ಅನುದಾನ ಬಿಡುಗಡೆ, ನಾಗಪಟ್ಟಣ ಸೇತುವೆ ದುರಸ್ತಿಗೆ 75 ಲಕ್ಷ ,ಆಡಿಂಜ ಸೇತುವೆಗೆ 25 ಲಕ್ಷ ಮಂಜೂರು
ಆಲೆಟ್ಟಿ ಗ್ರಾಮದ ಎರಡು ಕಡೆಗಳಲ್ಲಿ ಸೇತುವೆ ಕಾಮಗಾರಿಗೆ ಶಾಸಕರ ವಿಶೇಷ ಅನುದಾನ ರೂ.1 ಕೋಟಿ ಮಂಜೂರಾಗಿದ್ದು ಇಂದು ಎರಡು ಕಡೆಗಳಲ್ಲಿ ಗುದ್ದಲಿ ಪೂಜೆಯು ನೆರವೇರಿತು.
ಆಲೆಟ್ಟಿ ನಾಗಪಟ್ಟಣ ಪಯಸ್ವಿನಿ ನದಿಯ ಸೇತುವೆಯ ದುರಸ್ತಿ ಕಾಮಗಾರಿಗೆ ರೂ.75 ಲಕ್ಷ ಮಂಜೂರಾಗಿದ್ದು ಗುದ್ದಲಿ ಪೂಜೆಯನ್ನು ಜ.25 ರಂದು ನೆರವೇರಿಸಲಾಯಿತು. ಬಳಿಕ ಅಲ್ಲಿಂದ ಬಡ್ಡಡ್ಕ ಕೂರ್ನಡ್ಕ ರಸ್ತೆಯ ಮಧ್ಯೆ ಆಡಿಂಜ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮುಳುಗು ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸಲು ರೂ.25 ಲಕ್ಷ ಮಂಜೂರುಗೊಳಿಸಿದ್ದು ಕಾಮಗಾರಿಗೆ ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ರೂ.8 ಕೋಟಿ ಅನುದಾನ ಬಿಡುಗಡೆಯಾಗಿದ್ದು ಪ್ರಥಮ ಆದ್ಯತೆಯಲ್ಲಿ ಆಲೆಟ್ಟಿ ಗ್ರಾಮಕ್ಕೆ 1 ಕೋಟಿ ನೀಡಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಾಗರಿಕರು ಹೊಂದಾಣಿಕೆ ಮಾಡಿಕೊಂಡು ಸಹಕರಿಸಬೇಕು ಎಂದು ಹೇಳಿದರು.
ನಾರ್ಕೋಡು ದ್ವಾರದಿಂದ ಬಡ್ಡಡ್ಕ ಸಂಪರ್ಕದ ಅಂತರ್ ರಾಜ್ಯ ರಸ್ತೆಯ ಉಳಿದ ಭಾಗದ 4 ಕಿ.ಮೀ.ರಸ್ತೆಯ ಕಾಮಗಾರಿ ಕೆಲಸವನ್ನು ಶೀಘ್ರವಾಗಿ ಪೂರೈಸುವಂತೆ ಸ್ಥಳೀಯರು ಬೇಡಿಕೆ ಇರಿಸಿದರು.
ವೈಜ್ಞಾನಿಕವಾಗಿ
ಸೇತುವೆ ಕಾಮಗಾರಿ ನಿರ್ವಹಿಸುವುದರಿಂದ ಸ್ವಲ್ಪ ಕಾಲಾವಕಾಶ ಬೇಕಾಗುವುದು. ಕಾಮಗಾರಿ ಕೆಲಸವು 3-4 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಸೇತುವೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಗುತ್ತಿಗೆದಾರ ಸಂತೋಷ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ
ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ ಆಲೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ, ಪಂ.ಸದಸ್ಯರಾದ ದಿನೇಶ್ ಕಣಕ್ಕೂರು, ಶಿವಾನಂದ ರಂಗತ್ತಮಲೆ,
ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ಶಂಕರಿ ಕೊಲ್ಲರಮೂಲೆ, ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುಧಾಕರ ಆಲೆಟ್ಟಿ,ಗಂಗಾಧರ ಬಡ್ಡಡ್ಕ, ನ್ಯಾಯವಾದಿ ಸತೀಶ್ ಕುಂಭಕೋಡು, ಉದ್ಯಮಿ ಜಗದೀಶ್ ಸರಳಿಕುಂಜ, ಪ್ರದೀಪ್ ಕೊಲ್ಲರಮೂಲೆ, ಪ್ರಣೀತ್ ಕಣಕ್ಕೂರು, ಮಹೇಶ್ ಕುತ್ಯಾಳ, ಹೇಮನಾಥ ಬಡ್ಡಡ್ಕ,ದಿನೇಶ್ ಬಡ್ಡಡ್ಕ, ಕಮಲಾಕ್ಷ ಬಡ್ಡಡ್ಕ, ಸುಧಾಕರ ಬೆಳ್ಳೂರು, ನಾಗರಾಜ ಬಡ್ಡಡ್ಕ, ವೈಕುಂಠ ದೋಣಿಮೂಲೆ, ಅನಿಲ್ ಕುಮಾರ್ ಕೆ.ಸಿ.ಪರಿವಾರಕಾನ, ಗಂಗಾಧರ ಪತ್ತುಕುಂಜ, ನೀಲಕಂಠ ಕೊಲ್ಲರಮೂಲೆ, ಮೋಹನ ಎ.ಕೆ ಅರಂಬೂರು, ನವೀನ್ ನಾಯರ್ ಬಾರ್ಪಣೆ, ಪ್ರವೀಣ್ ಕಲ್ಲೆಂಬಿ, ಸತೀಶ್ ಗೂಡಿಂಜ, ಪುಂಡರೀಕ ಕಾಪುಮಲೆ, ಅರುಣ ಗೂಡಿಂಜ,ಸನತ್ ಕುಂಚಡ್ಕ, ಚಂದ್ರಶೇಖರ ಕುಡೆಕಲ್ಲು ಹಾಗೂ ಗುತ್ತಿಗೆದಾರರಾದ ಸಂತೋಷ್ ಮಂಗಳೂರು, ಹರೀಶ್ ಪುತ್ತೂರು,ಚಂದ್ರಶೇಖರ ಸುಳ್ಯ ರವರು ಉಪಸ್ಥಿತರಿದ್ದರು.