Home Uncategorized ಜ.31ರಂದು ಸುಳ್ಯ ವಲಯಾರಣ್ಯಾಧಿಕಾರಿ ಕಚೇರಿ ಸಹಾಯಕಿ ಶ್ರೀಮತಿ ಜಾನಕಿ ನಿವೃತ್ತಿ

ಜ.31ರಂದು ಸುಳ್ಯ ವಲಯಾರಣ್ಯಾಧಿಕಾರಿ ಕಚೇರಿ ಸಹಾಯಕಿ ಶ್ರೀಮತಿ ಜಾನಕಿ ನಿವೃತ್ತಿ

0

ಸುಳ್ಯ ವಲಯಾರಣ್ಯಾಧಿಕಾರಿಯವರ ಕಚೇರಿಯಲ್ಲಿ ಕಚೇರಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಮತಿ ಜಾನಕಿ ಎನ್ ರವರು ಜ.31 ರಂದು ಸೇವಾ ನಿವೃತ್ತಿ ಯಾಗಲಿದ್ದಾರೆ.

ಜಾಲ್ಸೂರು ಗ್ರಾಮದ ನೆಕ್ರಾಜೆ ದಿ.ಹುಕ್ರಪ್ಪ ಗೌಡ ಹಾಗೂ ದಿ.ದೇರಕ್ಕ ದಂಪತಿಗಳ ಪ್ರಥಮ ಪುತ್ರಿಯಾಗಿರುವ ಶ್ರೀಮತಿ ಜಾನಕಿ ಪದವಿಪೂರ್ಣ ಶಿಕ್ಷಣದೊಂದಿಗೆ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಶಿಕ್ಷಣವನ್ನು ಪಡೆದಿರುತ್ತಾರೆ.

1989 ನೇ ನವಂಬರ್ ನಲ್ಲಿ ಸುಳ್ಯ ವಲಯಾರಣ್ಯಧಿಕಾರಿಗಳ ಕಚೇರಿಯಲ್ಲಿ ಕಚೇರಿ ಸಹಾಯಕರಾಗಿ ಸೇರ್ಪಡೆಗೊಂಡು ಸುಮಾರು 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಜ.31 ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ಪ್ರಸ್ತುತ ಅಮರಪಡ್ನೂರು ಗ್ರಾಮದ ಕಂದಡ್ಕ ಎಂಬಲ್ಲಿ ನೆಲೆಸಿರುವ ಶ್ರೀಮತಿ ಜಾನಕಿಯವರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ತೋಟಗಳ ಅದೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗಿರಿಧರ ಗೌಡ ರ ಪತ್ನಿಯಾಗಿದ್ದು, ಪುತ್ರ ಇ.ಎಂಡ್. ಸಿ ಇಂಜಿನಿಯರಿಂಗ್ ಪದವಿಯನ್ನು ಪಡೆದು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ.

NO COMMENTS

error: Content is protected !!
Breaking