ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜಾತ್ರೋತ್ಸವ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಕಾರ್ಯಕ್ರಮ ನಡೆಯಿತು.
ಡಿ.15ರ ಬೆಳಿಗ್ಗೆ ಮಹಾ ಗಣಪತಿ ಹೋಮ, ಶ್ರೀ ದೇವರಿಗೆ ಕಲಶ ಪೂಜೆ, ೯ ಗಂಟೆಯ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ ದರ್ಶನ ಬಲಿ, ಹನ್ನೆರಡು ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಭಿಷೇಕ, ಮಹಾ ಪೂಜೆ, ವೈಧಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ನಡೆದು ಸಾಯಂಕಾಲ ಕೇರ್ಪಡದ ಗೌಡ ಮನೆತನದ ಭಂಡಾರ ಮನೆಯಿಂದ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ದೇವಸ್ಥಾನಕ್ಕೆ ಬರುವುದು ಹಾಗೂ ಸಂಜೆಯ ಬಳಿಕ ನೆಮೋತ್ಸವ ನಡೆಯಿತು.. ರಾತ್ರಿ ೮ ಗಂಟೆಗೆ ಶ್ರೀ ದೇವರಿಗೆ ಮಹಾ ಪೂಜೆ ಪ್ರಸಾದ ವಿತರಣೆ ನಡೆಯಿತು.
ಜಾತ್ರೋತ್ಸವ ಹಿನ್ನೆಲೆ ಸಾಂಸ್ಕೃತಿಕ ಅಂಗವಾಗಿ ಡ್ಯಾನ್ಸ್ & ಬೀಟ್ಸ್ ಬೆಳ್ಳಾರೆ ಯವರ ನೇತೃತ್ವ ದಲ್ಲಿ ಮುದ್ರಾರಂಗ ಮಕ್ಕಳ ರಂಗನಾಟಕ ತಂಡದಿಂದಉಚ್ಚಿಲ ವಿದ್ದು ರವರ ನಿರ್ದೇಶನದಲ್ಲಿ ಗೊಂಬೆ ರಾವಣ ವಿಶಿಷ್ಟ ನಾಟಕ ಪ್ರದರ್ಶನ ನಡೆಯಿತು ರಾತ್ರಿ ಶ್ರೀದೇವರ ಬಲಿ ಹೊರಟು ಉತ್ಸವ ಎ ದೊಡ್ಡ ರಂಗ ಪೂಜೆ ನಡೆಯಿತು