ಸುಳ್ಯ ನ್ಯಾಯಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿದ್ದ ಜನಾರ್ದನ್ ರಿಗೆ ಮಂಗಳೂರಿಂದ ಮೈಸೂರಿಗೆ ವರ್ಗಾವಣೆ

0

ಬೀಳ್ಕೊಡುಗೆ ಸಮಾರಂಭ

ಸುಳ್ಯ ನ್ಯಾಯಾಲಯದಲ್ಲಿ ಸಹಾಯಕ ಸಹಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ಮಂಗಳೂರಿನ ಆರನೇ JMFC ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಜನಾರ್ಧನ್ ಬಿ ರವರು ಮೈಸೂರು ಮೂರನೇ ಅಧಿಕ ಸಿಜೆ ಎಂ ನ್ಯಾಯಾಲಯಕ್ಕೆ ಎಪಿಪಿಯಾಗಿ ವರ್ಗಾವಣೆ ಹೊಂದಿದ್ದಾರೆ.

ಸಹಾಯಕ ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಿಗೆ ಜೈಲು ಶಿಕ್ಷೆ ಕೊಡಿಸುವಲ್ಲಿ ಜನಪ್ರಿಯ ರಾಗಿದ್ದ ಜನಾರ್ದನ್ ಬಿ ಇವರು ಸುಳ್ಯ ಹಾಗೂ ಮಂಗಳೂರು ನ್ಯಾಯಾಲಯದಲ್ಲಿಯು ಉತ್ತಮ ವಾದವನ್ನು ಮಂಡಿಸುತ್ತಿದ್ದರು.ಜನಾರ್ದನ್ ಅವರು ವಾದಿಸಿದ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ.

ಇವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿದ ಕಲಾವಿದರೂ ಕೂಡ ಆಗಿದ್ದು ಸ್ವತಃ ಇವರೇ ರಚಿಸಿದ ಕಾನೂನು ಜಾಗೃತಿ ಮೂಡಿಸುವ ಗೀತೆಗಳ ವೀಡಿಯೋ ಆಲ್ಬಂ ಹಾಡನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಜಸ್ಟೀಸ್ ಅಬ್ದುಲ್ ನಝೀರ್ ಅವರು ಅನಾವರಣ ಮಾಡಿ ಜನಾರ್ದನ್ ಅವರನ್ನು ಸನ್ಮಾನಿಸಿ ಗೌರವಿಸಿರುತ್ತಾರೆ.
ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಫೆ. 7 ರಂದು ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ತಾ ಇವರನ್ನು ಸನ್ಮಾನಿಸಿ ಬೀಳ್ಕೊಡಿಗೆ ಮಾಡಿದರು.

ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್, ಅಭಿಯೋಜಕರಾದ ಚೌದರಿ ಮೋತಿಲಾಲ್, ಜ್ಯೋತಿ ಪ್ರಮೋದ್ ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ರೈ, ಮನೋಜ್ ಕುಮಾರ್, ಇಬ್ರಾಹಿಂ ಭಾತಿಷ, ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ಮೊದಲಾದವರು ಉಪಸ್ಥಿತರಿದ್ದರು.

ಕಚೇರಿ ಸಿಬ್ಬಂದಿ ಅನಿಲ್ ಸ್ವಾಗತಿಸಿ ವಂದಿಸಿದರು. ಕಚೇರಿ ಮೇಲ್ವಿಚಾರಕ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.