2021 ನವೆಂಬರ್ 21 ರಂದು ಯಶವಂತ ಎಂಬುವರು ಮಂಗಳೂರಿಗೆ ಹೋಗಿ ವಾಪಾಸ್ಸು ಬರುವಾಗ ಸಂಜೆ 7:30 ಗಂಟೆಗೆ ಐವತೊಕ್ಲು ಗ್ರಾಮದ ಪಂಜ ಎಂಬಲ್ಲಿರುವ ಮಂಗಳ ಬಾರಿಗೆ ಪಾರ್ಸಲ್ ತರಲೆಂದು ಬಾರ್ ಒಳಗೆ ಹೋಗಿ ಹೊರಗೆ ಬರುತ್ತಿರುವಾಗ ಪಂಜದ ರಿಕ್ಷಾ ಚಾಲಕರಾದ ಸುಮಂತ್ ರೈ ಮತ್ತು ಹೇಮಂತ್ ಎಂಬುವರು ಸುಮಾರು 10 ಜನ ರಿಕ್ಷಾ ಚಾಲಕರೊಂದಿಗೆ ಬಂದು ಯಶವಂತರನ್ನು ತಡೆದು ನಿಲ್ಲಿಸಿ ಆರೋಪಿ ಸುಮಂತ್ ರೈ ಎಂಬಾತನು ಅವಾಚ್ಯ ಶಬ್ದಗಳಿಂದ ಬೈದು, ಮತೊಬ್ಬ ಆರೋಪಿ ಹೇಮಂತ್ ಎಂಬಾತನು ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಪ್ರಕರಣ ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಆರೋಪಿಗಳಾದ ಸುಮಂತ್ ರೈ ಮತ್ತು ಹೇಮಂತ್ ಮೇಲೆ ಸುಬ್ರಮಣ್ಯ ಪೋಲೀಸ್ ಠಾಣೆಯಲ್ಲಿ ಆಗಿನ ಠಾಣಾಧಿಕಾರಿ ಭಾರತೀಯ ದಂಢ ಸಂಹಿತೆ ಕಲಂ 341,504,506 ಜೊತೆಗೆ 34 ರಲ್ಲಿ ಪ್ರಕರಣ ದಾಖಲಿಸಿ ಸುಳ್ಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಳ್ಯ ಸಿವಿಲ್ ನ್ಯಾಯಲಯ ಇದರ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಯಾದ ಕುಮಾರಿ ಅರ್ಪಿತಾ ರವರು ಪ್ರಕರಣವನ್ನು ಸಾಭಿತು ಪಡಿಸಲು ಅಭಿಯೋಜನೆಯು ವಿಫಲ ಗೊಂಡಿದೆ ಎಂದು ಅಭಿಪ್ರಾಯಿಸಿ ಆರೋಪಿಗಳನ್ನು ನಿರ್ದೋಶಿ ಎಂದು ದಿನಾಂಕ : 27/01/2025 ರಂದು ತೀರ್ಪು ನೀಡಿ ಬಿಡುಗಡೆಗೆ ಆದೇಶಿಸಿದ್ದಾರೆ . ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ ವಾದಿಸಿದ್ದರು.