ಶ್ರೀ ಗುಳಿಗ ದೈವ, ಸತ್ಯದೇವತೆ ಕುಂಞಿಮಾಣಿಗ, ಕೊರಗ ತನಿಯ ದೈವಗಳ ನೇಮೋತ್ಸವ
ನೆಲ್ಲೂರು ಕೆಮ್ರಾಜೆ ಗ್ರಾಮದ ಶ್ರೀ ದೀನದಯಾಳ್ ಎಜುಕೇಶನ್ ರೂರಲ್ ಮತ್ತು ಅರ್ಬನ್ ಡೆವಲಪ್ ಮೆಂಟ್ ಟ್ರಸ್ಡ್ ದಾಸನಕಜೆ,ಶ್ರೀ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ಸನ್ನಿಧಿಯಲ್ಲಿ ಫೆ.,15 ಮತ್ತು ಫೆ 16 ರಂದು ದೈವಗಳ ನೇಮೋತ್ಸವ ನಡೆಯಲಿದೆ. ಫೆ. 15 ರಂದು ಪೂರ್ವಾಹ್ನ ಗಂಟೆ 9.00 ಕ್ಕೆ ಶ್ರೀ ಗಣಪತಿ ಹೋಮ,,9.45 ರಿಂದ 10.25 ರ ಒಳಗೆ ಶ್ರೀ ದೈವಗಳ ಭಂಡಾರ ತೆಗೆಯಲಾಗುವುದು.
ಬೆಳಿಗ್ಗೆ 10.30 ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜೆ,ಮಧ್ಯಾಹ್ನ ಗಂಟೆ 1.00 ರಿಂದ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 4.18 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು. ಸಂಜೆ ಗಂಟೆ 5.00 ಕ್ಕೆ ಶ್ರೀ ಗುಳಿಗ ದೈವದ ನೇಮ,ರಾತ್ರಿ 10.00 ಕ್ಕೆ ಶ್ರೀ ಮೊಗೇರ್ಕಳ ದೈವಗಳ ಗರಡಿ ಇಳಿಯುವುದು ಮತ್ತು ನೇಮೋತ್ಸವ ನಡೆಯಲಿದೆ.
ರಾತ್ರಿ ಗಂಟೆ 12.00 ಕ್ಕೆ ಸತ್ಯದೇವತೆ ಕುಂಞಿಮಾಣಿಗ ದೈವಗಳ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 1.00 ಕ್ಕೆ ಪಾತ್ರಿಗಳ ದರ್ಶನ ಬೆಳಿಗ್ಗೆ 6.00 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಫೆ.16 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಕಾರ್ಣಿಕ ದೈವ ಶ್ರೀ ಕೊರಗ ತನಿಯ ದೈವದ ನೇಮ ನಡೆಯಲಿದೆ. ಪೂರ್ವಾಹ್ನ ಗಂಟೆ 11.00 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷ ಎಸ್.ಅಂಗಾರರವರು ತಿಳಿಸಿದ್ದಾರೆ.