ಶಾರದಾಂಬಾ ಇಂಜಿನಿಯರಿಂಗ್ ವರ್ಕ್ಸ್ ಮಾಲಕ ಶಶಿಧರ ಪಿಳೈ ಸೇರಿದಂತೆ ಒಟ್ಟು 14 ಮಂದಿ ಹಿರಿಯ & ಕಿರಿಯ ಪ್ರೋತ್ಸಾಹಿಗಳಿಗೆ ಗೌರವ
ಸುಳ್ಯ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮೂಕಾಂಬಿಕ ಹಾರ್ಡ್ವೇರ್ & ಸ್ಟೀಲ್ಸ್ ನವರ ಸಹಸಂಸ್ಥೆ ಇದೇ ಹೆಸರಿನಲ್ಲಿ ನಾವೂರು ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಆ.27 ರಂದು ಗಣ್ಯರ ಸಮ್ಮುಖದಲ್ಲಿ ಪ್ರಾರಂಭಗೊಂಡಿತು. ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರದಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು.

ಬಳಿಕ ನಡೆದ ಸಮಾ ಕಾರ್ಯಕ್ರಮದಲ್ಲಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಂಜಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿಬಿ ಸುಧಾಕರ ರೈ, ಇಂಜಿನಿಯರ್ ಅಸೋಸಿಯೇಶನ್‌ನ ಸುಳ್ಯ ತಾ ಇದರ ಅಧ್ಯಕ್ಷ ಶ್ಯಾಮ್ ಪ್ರಸಾದ್, ದಾಮಿನಿ ಮೋಟರ್ಸ್ ಮಾಲಕ , ಸ್ಥಳ ಮಾಲಕ ನಿರಂಜನ್ ಎಮ್‌ಡಿ, ಆನಂದ ಇಲೆಕ್ಟ್ರಿಕಲ್ಸ್ ಮಾಲಕ ಆನಂದ ಪೂಜಾರಿ, ದ.ಕ.ಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ದನಂಜಯ ಅಡ್ಪಂಗಾಯ, ತಾ.ಗೌಡ ಮಹಿಳಾ ಘಟಕ ಅಧ್ಯಕ್ಷೆ ವಿನುತಾ ಪಾತಿಕಲ್ಲು ಉಪಸ್ಥಿತರಿದ್ದು ಶುಭ ಹಾರೈಸಿದರು.



ಬಳಿಕ ತಾಲೂಕಿನ ಹಿರಿಯ ಹಾಗೂ ಕಿರಿಯ ಪ್ರೋತ್ಸಾಹಿಗಳಾದ ಶ್ರೀ ಶಾರದಾಂಬ ಇಂಜಿನಿಯರ್ ವರ್ಕ್ಸ್ ಗಾಂಧಿನಗರ ಇದರ ಮಾಲಕ ಶಶಿಧರ್ ಪಿಳೈ, ಶ್ರೀ ಭಗವತಿ ವೆಲ್ಡಿಂಗ್ ವರ್ಕ್ಸ್ ಜಾಲ್ಸೂರು ಇದರ ಮಾಲಕ ಭಾಸ್ಕರ ಜಾಲ್ಸೂರು, ಶ್ರೀ ನಾಗೇಶ್ ಇಂಡಸ್ಟ್ರೀಸ್ ಅಟಾಲ್‌ನಗರ ಇದರ ಮಾಲಕ ನಾಗೇಶ್ ಕೇರ್ಪಳ, ಭಾರತ್ ಇಂಡಸ್ಟ್ರೀಸ್ ಮಾಲಕ ಬಾಲಕೃಷ್ಣ ಪಾತಿಕಲ್ಲು, ಶ್ರೀ ಮಲ್ಲಿಕಾರ್ಜುನ ಇಂಜಿನಿಯರಿಂಗ್ ವರ್ಕ್ಸ್ ಜಟ್ಟಿಪಳ್ಳ ಇದರ ಮಾಲಕ ಚಂದ್ರಶೇಖರ ಜೋಡಿಪಣೆ, ಶ್ರೀ ಗಣೇಶ್ ಇಂಡಸ್ಟ್ರೀಸ್ ಸರಳಿಕುಂಜ ಇದರ ಮಾಲಕ ಜಗದೀಶ್ ಸರಳಿಕುಂಜ, ಶ್ರೀ ವಿಷ್ಣು ಇಂಡಸ್ಟೀಸ್ ಕಲ್ಲುಗುಂಡಿ ಇದರ ಮಾಲಕ ರಮೇಶ್ ಕಲ್ಲುಗುಂಡಿ, ಆರ್‌ಕೆ ಸ್ಟೀಲ್ ಮಾಲಕ ಚಿದಾನಂದ ಎ, ಪೈಂಟರ್ ಗಳಾದ ವಸಂತ, ವಿಜಯ ಕುಮಾರ್, ವೃದಾಂವನ್ ಕನ್ಸ್ಟ್ರಕ್ಷನ್ ಮಾಲಕ ವಿಶಾಲ್ ಮೂರ್ಜೆ, ಶ್ರೀ ದೇವಿ ಕನ್ಸ್ಟ್ರಕ್ಷನ್
ಮಾಲಕ ಸನತ್ ಮೂರ್ಜೆ, ಅರೋಹನ್ ಅಸೋಸಿಯೇಟ್ಸ್ & ಕನ್ಸ್ಟ್ರಕ್ಷನ್, ಕನ್ಸಲ್ಟೆನ್ಸಿ ಮಾಲಕ ಸೃಜನ್ ಬಿಎಚ್, ಪಾತಿಕಲ್ಲು ಬಿಲ್ಡರ್ & ಡೆವಲಪರ್ಸ್ ಮಾಲಕ ಮಿಲನ್ ಇವರನ್ನು ಶಾಲು ಹಾಗೂ ಫಲಕ ನೀಡಿ ಗಣ್ಯರು ಗೌರವಿಸಿದರು.
ಸಂಸ್ಥೆಯ ಪಾಲುದಾರ ದೀಕ್ಷಿತ್ ಪ್ರಸ್ತಾವಿಕವಾಗಿ ಮಾತನಾಡಿ, ಆತಿಥಿಗಳನ್ನು ಸ್ವಾಗತಿಸಿದರು. ಇನ್ನೋರ್ವ ಪಾಲುದಾರ ಶ್ರೀಕಾಂತ್ ಡಿಪಿ ಸಹಕರಿಸಿದರು. ಈ ಸಂದರ್ಭ ಮಾಲಕರ ಪೋಷಕರು, ಕುಟುಂಬಸ್ಥರು, ಬಂಧುಗಳು ಹಾಜರಿಸಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯ ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.















ಬೆಳೆಯುತ್ತಿರುವ ಸುಳ್ಯಕ್ಕೆ ಹೊಸ ತಂತಜ್ಞಾನ ಪರಿಚಯಿಸಿ, ಹೊಸತನವನ್ನು ಹೆಚ್ಚು ಕಲಿಯುತ್ತ ಹೋಗಿ: ಗಿರೀಶ್ ಭಾರದ್ವಜ್
ಪುಟ್ಟ ಸಂಸ್ಥೆ ಇನ್ನು ಹೆಮ್ಮರವಾಗಿ ಬೆಳೆಯಲಿ, ನಮ್ಮ ಪ್ರೋತ್ಸಾಹ ಸದಾ ಇರುತ್ತದೆ-ಅಕ್ಷಯ್ ಕೆ.ಸಿ.
ಸುಳ್ಯಕ್ಕೆ ಇಂತಹ ಸಂಸ್ಥೆಗಳು ಎಷ್ಟು ಇದ್ದರೂ ಸಾಲದು, ಇದರ ಡಿಮ್ಯಾಂಡ್ ಕಡಿಮೆಯಾಗುದಿಲ್ಲ-ಮಾವಂಜಿ
ಸುಳ್ಯ ಬಿಟ್ಟು ಹೊರಗೆ ಹೋಗದೆ ಊರಿನಲ್ಲಿ ಉದ್ಯೋಗ ಸೃಷ್ಟಿಸಿದ್ದೀರಿ – ಸುಧಾಕರ ರೈ
ಮಕ್ಕಳು ಬೆಳಯಬೇಕು, ಸ್ವಂತ ಕಾಲಿನಲ್ಲಿ ನಿಲ್ಲಬೇಕು, ನಮ್ಮ ಊರಿಗೆ ಹೆಸರು ತರಬೇಕು- ವಿನುತಾ ಪಾತಿಕಲ್ಲು
ಇಲ್ಲಿ ಕಬ್ಬಿಣ, ರೂಫಿಂಗ್ ಶೀಟ್ಸ್, ಜಿಐ ಟ್ಯೂಬ್ಸ್, ಎಂಎಸ್ ಸಿಂಗಲ್ ಮತ್ತು ಚಾನಲ್, ಜೆಐ ಮೆಶ್, ಕೋಟೆಡ್ ಮೆಶ್, ಪೈಂಟ್ಸ್, ಬಿಲ್ಡಿಂಗ್ ಮೆಟೀರಿಯಲ್ಸ್, ಪವರ್ ಟೂಲ್ಸ್, ಹ್ಯಾಂಡ್ ಟೂಲ್ಸ್, ಪ್ರೊಟೆಕ್ಟಿವ್ ಸೇಫ್ಟಿವೇರ್, ಬೋಲ್ಟ್-ನಟ್ಸ್, ಪ್ಲಾಸ್ಟಿಕ್ ಐಟಂ, ಯುಪಿವಿಸಿ ಐಟಂ, ಅಡ್ವಾನ್ಸ್ ಟೂಲ್ಸ್ , ಪೈಂಟ್ ಸೇರಿದಂತೆ ಎಲ್ಲಾ ರೀತಿಯ ಹಾರ್ಡ್ವೇರ್ ಉಪಕರಣಗಳು ಮಿತದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.










