ಐ ಎಫ್ ಸಿ ಗುತ್ತಿಗಾರು ಆಯೋಜಿಸಿದ ಜಿಲ್ಲಾ ಮಟ್ಟದ ಐ ಎಫ್ ಸಿ ರನ್ ಮ್ಯಾರಥಾನ್ ಗೆ ಫೆ.9 ರಂದು ವಳಲಂಬೆ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು. ಕಾಯಿ ಒಡೆಯುವದರ ಮೂಲಕ ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಾಜೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಮಾಜಿ ಮಂಡಲ ಪ್ರಧಾನರಾದ ಮುಳಿಯ ತಿಮ್ಮಪ್ಪಯ್ಯ, ರಾಷ್ಟ್ರೀಯ ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್ ಮತ್ತು ವೆಂಕಟ್ ವಳಂಬೆ ಅಧ್ಯಕ್ಷರು ಬಿಜೆಪಿ ಸುಳ್ಯ ತಾಲೂಕು ಸಮಾಜ ಸೇವಕ ಚಂದ್ರಶೇಖರ ಕಡೋಡಿ, ಮಾಯಿಲಪ್ಪ ಕೊಂಬೊಟ್ಟು ಉಪಸ್ಥಿತರಿದ್ದರು.









ಸಂಸ್ಥೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ವೆಂಕಟ್ ದಂಬೆಕೋಡಿ ಮತ್ತು ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು. ಅವರು ಕ್ರೀಡಾ ಕ್ಷೇತ್ರದ ಪ್ರಭಾವ ಮತ್ತು ಯುವ ಜನಾಂಗದ ಭವಿಷ್ಯಕ್ಕೆ ಕ್ರೀಡೆ ನೀಡುವ ಪ್ರೇರಣೆಯ ಬಗ್ಗೆ ಮಾತುಗಳನ್ನು ಹಂಚಿಕೊಂಡರು.
ಬಹುಮಾನ ವಿತರಣಾ ಕಾರ್ಯಕ್ರಮವನ್ನು ವಿನ್ಯಾಸ್ ಕೋಚ್ಚಿ ನೆರವೇರಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ದಿನೇಶ್ ಹಾಲೆಮಜಲು ಮತ್ತು ಕು. ಮಂದಾರ ಬಾಳುಗೋಡು ಉಪಸ್ಥಿತರಿದ್ದು, ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ Important FC (R.)ಗುತ್ತಿಗಾರು ನ ಉಪಾಧ್ಯಕ್ಷರಾದ ಕೌಶಿಕ್ ಶ್ಯಾಮ್, ಸುಮುಖ ರಾಮ್, ಶ್ರೀಶರಣ್ ಮೋಗ್ರಾ ಮತ್ತು ಮೊನಿಷ್ ಬಾಕಿಲ ಉಪಸ್ಥಿತರಿದ್ದರು. ಹಾಗೆಯೇ ಕಾರ್ಯದರ್ಶಿಗಳಾದ ವರ್ಷಿತ್ ಕಡ್ತಲ್ ಕಜೆ ಮತ್ತು ಕಿರಣ್ ವಳಲಂಬೆ ಈ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು.
ನಿರ್ದೇಶಕರಾದ ರಾಕೇಶ್ ಮೆಟ್ಟಿನಡ್ಕ ಮತ್ತು ಬಾಲಕೃಷ್ಣ ಉಜಿರಡ್ಕ ಸಹ ಈ ಮಹತ್ವದ ಮ್ಯಾರಥಾನ್ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದು, ಸ್ಪರ್ಧಾರ್ಥಿಗಳನ್ನು ಉತ್ತೇಜಿಸಿದರು.

ಈ ಮ್ಯಾರಥಾನ್‌ಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದು ಪಾಲ್ಗೊಂಡ ಸ್ಪರ್ಧಾರ್ಥಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಸಂಯೋಜಕರಾಗಿ ಚರಣ್ ಕೊಂಬೊಟ್ಟು ಈ ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಿಸಿದರು. ಸ್ಪರ್ಧಾರ್ಥಿಗಳ ಉತ್ಸಾಹ ಮತ್ತು Important FC ತಂಡದ ಶ್ರಮದಿಂದ ಈ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಂಡಿತು.










