








ಆಲೆಟ್ಟಿ ಶ್ರೀ ಸದಾಶಿವ ದೇವಳದಲ್ಲಿ ನೂತನ ವಾಗಿ ನಿರ್ಮಿಸಲಾದ ಶೌಚಾಲಯದ ಹಾಗೂ
ಕೈ ತೊಳೆಯುವ ನೀರಿನ ಘಟಕದಉದ್ಘಾಟನೆಯು ಇಂದು ಪೂರ್ವಾಹ್ನ ನೆರವೇರಿತು.

ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ ಕೋಲ್ಚಾರು, ಶ್ರೀಮತಿ ಶಶಿಕಲಾ ದೋಣಿಮೂಲೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಶ್ರೀಪತಿ ಭಟ್ ಮಜಿಗುಂಡಿ, ವ್ಯ.ಸ.ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ವ್ಯ.ಸ.ಸದಸ್ಯರಾದ ಹರಿಪ್ರಸಾದ್ ಗಬ್ಬಲ್ಕಜೆ, ಅಚ್ಚುತ ಮಣಿಯಾಣಿ ಆಲೆಟ್ಟಿ, ಮಮತಾ ನಾರ್ಕೋಡು, ನಳಿನಿ ರೈ ಆಲೆಟ್ಟಿ ಹಾಗೂ
ನವೀನ್ ಕುಮಾರ್ ಗುಂಡ್ಯ,ಕೇಶವ ಮೊರಂಗಲ್ಲು, ಜನಾರ್ದನ ನಾಯ್ಕ್ಬಾರ್ಪಣೆ,
ಶಂಕರ ಪಾಟಾಳಿ ಬಡ್ಡಡ್ಕ, ಚಂದ್ರಶೇಖರ ಕೋಲ್ಚಾರು, ಹುಕ್ರಪ್ಪ ನಾಯ್ಕ ಬಾರ್ಪಣೆ, ಭಜನಾ ಸಂಘದ
ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ,ದೇವಯ್ಯ ಗೌಡ ಮೊರಂಗಲ್ಲು,ನವೀನ್ ಕುಮಾರ್ ಆಲೆಟ್ಟಿ ಉಪಸ್ಥಿತರಿದ್ದರು.
ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿ, ವಂದಿಸಿದರು.










