








ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಬೆಳ್ಳಾರೆ, ಜೇಸಿಐ ಬೆಳ್ಳಾರೆ ಮತ್ತು ನಿನಾದ ಸಂಸ್ಕೃತಿಕ ಕಲಾ ಕೇಂದ್ರ ತಂಟೆಪ್ಪಾಡಿ ಇವುಗಳ ಆಶ್ರಯದಲ್ಲಿ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ಹಾಗೂ ಆಸಕ್ತ ಮೊಂಟೆಸ್ಸರಿ ಅಥವಾ ನರ್ಸರಿ ಶಿಕ್ಷಕಿಯರಿಗೆ ಎರಡು ದಿನಗಳ ರಂಗ ಚಟುವಟಿಕೆ ಕಾರ್ಯಾಗಾರ ಫೆ.22 ಮತ್ತು ಫೆ. 23 ರಂದು ತಂಟೆಪ್ಪಾಡಿ ನಿನಾದ ಸಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆಯಲಿದೆ. ಹಿರಿಯ ಜಾನಪದ ಕಲಾವಿದ ಬಾಬು ಅಜಿಲ ಬಾಳಿಲ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಕಲಾವಿದರುಗಳಾದ ಚಂದ್ರನಾಥ ಬಜಗೋಳಿ, ಮಿಥುನ್ ಕುಮಾರ್ ಸೋನ ಮತ್ತು ಧೀರಜ್ ಬೆಳ್ಳಾರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಫೆ.23ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಿರುತೆರೆ ಮತ್ತು ಚಲನಚಿತ್ರ ನಟಿ ಭವ್ಯಶ್ರೀ ಪೂಜಾರಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










