ಕಲ್ಲುಗುಂಡಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಕಲ್ಲುಗುಂಡಿ ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ, ಮುತ್ತು ಮಾರಿಯಮ್ಮ ,ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ , ನವಗ್ರಹ , ಹಾಗೂ ಪರಿವಾರ ದೈವಗಳಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವೈಧಿಕ ಕಾರ್ಯಕ್ರಮಗಳು ಫೆ 18 ಮತ್ತು 19 ರಂದು ವೈಧಿಕ ವಿಧಾನಗಳೊಂದಿಗೆ
ನಡೆಯಿತು.

ಫೆ .18 ರಂದು ಸಂಜೆ 6 ಗಂಟೆಗೆ ಕುಂಟಾರು ತಂತ್ರಿಗಳನ್ನು ಪೂರ್ಣ ಕುಂಭದ ಸ್ವಾಗತ ಮಾಡಲಾಯಿತು. ಬಳಿಕ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನ ,ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ , ಆಚಾರ್ಯವರಣ , ಪುಣ್ಯಾಹ ವಾಚನ, ಸುದರ್ಶನ ಹೋಮ, ಪ್ರೇತ ಆವಾಹನೆ, ಭಾಧಾ ಮೂರ್ತಿಗಳ ಆವಾಹನೆ, ಉಚ್ಛಾಟನೆ, ಉಚ್ಛಾಟನೆ ಬಲಿ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ , ವಾಸ್ತು ಬಲಿ , ವಾಸ್ತು ಪುಣ್ಯಾಹಂತ ವೈದಿಕ ಪೂಜಾ ಕಾರ್ಯಕ್ರಮಗಳು ನಡೆಯಿತು. ಫೆ.19 ರಂದು ಬೆಳಗ್ಗೆ ಗಣಪತಿ ಹವನ, ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ , ಮಹಾಪೂಜೆ, ನಿತ್ಯ ನೈಮಿತ್ಯಗಳ ನಿರ್ಣಯ, ಬಳಿಕ ಪ್ರಸಾದ ವಿತರಣೆ ನಡೆಯಿತು.


ಈ ವೇಳೆ ಮುತ್ತುಮಾರಿಯಮ್ಮ ದೇವಸ್ಥಾನದ ಮೊಕ್ತೇಸರಾದ ಎಸ್ ಪಳನಿವೇಲು, ಅಧ್ಯಕ್ಷ ಜ್ಞಾನ ಶೀಲನ್, ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಪದ್ಮಯ್ಯ ಬಿ. ಆರ್, ಆಡಳಿತ ಸಮಿತಿ ಕೋಶಾಧಿಕಾರಿ ನಾಗಮುತ್ತು, ಕಾರ್ಯದರ್ಶಿ ಚರಣ್ ರಾಜ್, ಪ್ರಧಾನ ಅರ್ಚಕ ಭಾಸ್ಕರ ಭಟ್, ಗ್ರಾಂ.ಪಂ ಅಧ್ಯಕ್ಷೆ ಸುಮತಿ ಶಕ್ತಿ ವೇಲು , ಮುತ್ತು ಮಾರಿಯಮ್ಮ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಪಿ.ವಿ , ಆಡಳಿತ ಸಮಿತಿ, ಬ್ರಹ್ಮ ಕಲಶೋತ್ಸವ ಸಮಿತಿ, ಅಲಂಕಾರ ಸಮಿತಿ, ಸ್ವಯಂ ಸಮಿತಿ, ಆರ್ಥಿಕ ಸಮಿತಿ, ಆಹಾರ ಸಮಿತಿಯ ಪದಾಧಿಕಾರಿಗಳು , ಸರ್ವ ಸದಸ್ಯರು, ಊರ ಪರವೂರ
ಆಡಳಿತ ಮಂಡಳಿ , ಸರ್ವ ಸದಸ್ಯರು, ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.