
ತೊಡಿಕಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ. 22 ರಂದು ಮೆಟ್ರಿಕ್ ಮೇಳ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಚಿದಾನಂದ ಮಾಸ್ಟರ್ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದರು. ಎಸ್ ಡಿ ಎಮ್ ಸಿ ಅಧ್ಯಕ್ಷ ನವೀನ್ ಎ.ಬಿ ಹಾಗೂ ಸದಸ್ಯರು , ವಿದ್ಯಾರ್ಥಿಗಳ ಪೋಷಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಎಂ ಸ್ವಾಗತಿಸಿ, ಸಹ ಶಿಕ್ಷಕಿ ಸ್ನೇಹಲತಾ ವಂದಿಸಿದರು. ಸಹಶಿಕ್ಷಕ ಬಲರಾಜ್ ಕಾರ್ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಮಮತಾ, ಶ್ರೀಮತಿ ನಾಗವೇಣಿ, ಕು. ವಿದ್ಯಾಶ್ರೀ ಸಹಕರಿಸಿದರು.









ವಿದ್ಯಾರ್ಥಿಗಳು ಹಣ್ಣು ತರಕಾರಿಗಳು, ತಿಂಡಿ ತಿನಿಸುಗಳು, ಫ್ಯಾನ್ಸಿ ಐಟಂಗಳು, ತಂಪು ಪಾನೀಯ ಮಾರಾಟ ಮಾಡಿ ತಮ್ಮ ವ್ಯವಹಾರಿಕ ಜ್ಞಾನವನ್ನು ಬೆಳೆಸಿಕೊಂಡರು.










