ಫೆ.26:ರೆಂಜಾಳ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

0

46ನೇ ವರ್ಷದ ಅರ್ಧ ಏಕಾಹ ಭಜನೆ

ಮರ್ಕಂಜ ಮತ್ತು ನೆಲ್ಲೂರುಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲೊಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಫೆ.26ರಂದು ಬ್ರಹ್ಮಶ್ರೀ ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು 46 ನೇ ವರ್ಷದ ಅರ್ಧ ಏಕಾಹ ಭಜನೆ ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ಜರಗಲಿರುವುದು.
ಫೆ.26 ರಂದು ಬೆಳಿಗ್ಗೆ 7.30 ರಿಂದ ಪ್ರಾತಃಪೂಜೆ, ಗಣಪತಿ ಹವನದ ಬಳಿಕ ರುದ್ರಾಭಿಷೇಕ ನಡೆದು ಬಿಲ್ವಾರ್ಚನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಬೆಳಿಗ್ಗೆ 10.30 ರಿಂದ ಹೊನ್ನಾಡಿ ರೇಖಾ ರೇವತಿಯವರ ಸಮ್ಮುಖದಲ್ಲಿ ಎಲಿಮಲೆ ರಂಜಿನಿ ಸಂಗೀತ ಸಭಾದ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.37 ಕ್ಕೆ ಅರ್ಧ ಏಕಾಹ ಭಜನೆಯ ದೀಪಾರಾಧನೆ ನಡೆಯಲಿದ್ದು, ದೇವಳದ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ದೀಪ ಬೆಳಗಿಸುವರು. ರಾತ್ರಿ 7 ರಿಂದ ಏಕಾದಶ ರುದ್ರಾಭಿಷೇಕ, ಪಾರಾಯಣ ಸಹಿತ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನಡೆದು, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಫೆ.27 ರಂದು ಬೆಳಿಗ್ಗೆ ಮಂಗಳಾರ್ಪಣೆ ನಡೆದು ದೀಪ ವಿಸರ್ಜನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.