ಸ. ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ಹರಿಹರ ಪಳ್ಳತಡ್ಕ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ “ಕಲಿಕಾ ಹಬ್ಬ “2024-25″ ನಿಪುನ್ ಭಾರತ ಪ್ರಾಯೋಜಿತ ” ಕಾರ್ಯಕ್ರಮವನ್ನು ಸ. ಹಿ.. ಪ್ರಾ. ಶಾಲೆ ಬಂಗ್ಲೆಗುಡ್ಡೆ,ಕೊಲ್ಲಮೊಗ್ರು ಇಲ್ಲಿ ಫೆ.24 ರಂದು ಹಮ್ಮಿ ಕೊಳ್ಳಲಾಯಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ವಹಿಸಿದ್ದರು. ಉದ್ಘಾಟನೆಯನ್ನು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಕಟ್ಟ ನಡೆಸಿಕೊಟ್ಟರು. ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಮೋಹನ ಅಂಬೆಕಲ್ಲು , ಶಿಕ್ಷಣ ಇಲಾಖೆಯಿಂದ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತಾಜೆ , ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ಕಮಲ.ಎ ಉಪಸ್ಥಿತರಿದ್ದರು.

ವೇದಿಕೆಯಲ್ಲಿದ್ದ ಗಣ್ಯರನ್ನು ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು, ಕಲಿಕಾ ಹಾರ ಹಾಗೂ ಟೋಪಿ ತೊಡಿಸಿ, ಕಲಿಕಾ ಹಬ್ಬ 2025 ನ್ನು ದೀಪ ಬೆಳಗಿಸುವುದು ಹಾಗೂ ಕಲ್ಪವೃಕ್ಷವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಬಂಗ್ಲೆಗುಡ್ಡೆ ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಪದವೀಧರ ಪ್ರಾಥಮಿಕ ಶಿಕ್ಷಕಿ ರೇಷ್ಮಾ.ಪಿ ಇವರಿಂದ ಕಾರ್ಯಕ್ರಮ ನಿರ್ವಹಣೆ ನಡೆಯಿತು. ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತ್ತಾಜೆ ಮಾತುಗಳನ್ನಾಡಿದರು. ಕಾರ್ಯಕ್ರಮದ ಕೊನೆಗೆ ಶಿಕ್ಷಕಿ ಶ್ರೀಮತಿ ಪವಿತ್ರಾವಿಜೇತ್ ಇವರು ಸರ್ವರಿಗೂ ವಂದನೆಗಳನ್ನು ಸಮರ್ಪಿಸಿದರು.


ಮುಂದೆ ಸಿ ಆರ್ ಪಿ ಯ ವರು ನಿರ್ಣಾಯಕರಿಗೆ, ನಿರ್ವಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ಏಳು ಸ್ಪರ್ಧಾ ವೇದಿಕೆಗಳತ್ತ ತೆರಳಲು ಅನುವು ಮಾಡಿಕೊಟ್ಟರು. ಮುಂದೆ ವೇದಿಕೆಗಳಲ್ಲಿ ನಿರಂತರ ಸ್ಪರ್ಧೆಗಳು ನಡೆದವು. ನಿರ್ವಾಹಕರಾಗಿ ಹರಿಹರ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಕರ್ತವ್ಯ ನಿರ್ವಹಿಸಿದರೆ, ನಿರ್ಣಾಯಕರುಗಳಾಗಿ ಗುತ್ತಿಗಾರು ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ನಿರ್ಣಾಯಕರು ಪಾರದರ್ಶಕ ನಿರ್ಣಯವನ್ನು ಕೈಗೊಂಡು ಅರ್ಥಪೂರ್ಣವಾಗಿ ಸ್ಪರ್ಧೆಗಳನ್ನುಯಶಸ್ವಿಗೊಳಿಸಿದರು.ನಂತರ ವೇದಿಕೆಗಳಲ್ಲಿನ ಸ್ಪರ್ಧಾ ಫಲಿತಾಂಶ ಪ್ರಕಟಿಸಲಾಯಿತು. ಕಥೆ ಕಟ್ಟುವ ಸ್ಪರ್ಧೆ – ಸ್ಪರ್ಧಾ ಪ್ರದರ್ಶನ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.ಮುಂದೆ “ಕಥೆ-ಸ್ಪರ್ಧಾ – ಪ್ರದರ್ಶನ “ವೇದಿಕೆಯಲ್ಲಿ ವಿದ್ಯಾರ್ಥಿ- ಶಿಕ್ಷಕರಿಂದ ಕಲಿಕೋಪಕರಣ ಪ್ರದರ್ಶನ ನಡೆಯಿತು .ಕ್ಲಸ್ಟರ್ ವ್ಯಾಪ್ತಿಯ 9 ಶಾಲೆಗಳ ವಿದ್ಯಾರ್ಥಿ – ಶಿಕ್ಷಕರು ಅತ್ಯುತ್ತಮವಾಗಿ ಕಲಿಕೋಪಕರಣ ಪ್ರದರ್ಶನ ಮಾಡಿ ಎಲ್ಲರಿಗೂ ಕಲಿಕಾ ಸಾಮರ್ಥ್ಯದ – ಅರಿವು ಮೂಡಿಸಿದರು.

ಕೊನೆಗೆ “ಸಮಾರೋಪ ಸಮಾರಂಭ ” ಹಮ್ಮಿಕೊಳ್ಳಲಾಯಿತು ವೇದಿಕೆಯಲ್ಲಿ ಚಂದ್ರಶೇಖರ ಕೋನಡ್ಕ, ಶ್ರೀಮತಿ ಜಯಶ್ರೀ ಚಾಂತಾಳ, ಹರ್ಷ ಅಡ್ನೂರುಮಜಲು, ಕುಶಾಲಪ್ಪ ತುಂಬತ್ತಾಜೆ ಉಪಸ್ಥಿತರಿದ್ದರು . ಶ್ರೀಮತಿ ಮಾಲಿನಿ ಲೋಕೇಶ್ ವಿಜೇತರ ಪಟ್ಟಿ ವಾಚಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ದಿಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಮಾರೋಪ ಸಮಾರಂಭದ ಕೊನೆಯ ಅಂಗವಾಗಿ ಶಾಲಾ ಶಿಕ್ಷಕಿ ಪವಿತ್ರ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಸರ್ವರಿಗೂ ಉಪಹಾರ, ಮಧ್ಯಾಹ್ನದ ಸಿಹಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.