ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ಸ್ನೇಹ ಸಂಗಮ ಯೋಗ ಬಳಗ(ರಿ.), ಪತಂಜಲಿ ಯೋಗ ಕೇಂದ್ರ ಹಾಗೂ ಭುವನ್ ರಾಜ್ ಫೌಂಡೇಶನ್ ಮೈಸೂರು ಇವುಗಳ ಸಹಯೋಗದೊಂದಿಗೆ ಫೆ.23 ರಂದು ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 8 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹಸ್ತ ಗೊರಸಿನಮನೆ(ಏನೆಕಲ್ಲು) ಬೆಳ್ಳಿ ಪದಕ, 8 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಯಶ್ವಿನ್ ಅಳಕ್ಕೆ(ತಂಟೆಪ್ಪಾಡಿ) ಬೆಳ್ಳಿ ಪದಕ, 8 ವರ್ಷದಿಂದ 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು(ಏನೆಕಲ್ಲು) ಕಂಚಿನ ಪದಕ, 12 ವರ್ಷದಿಂದ 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸುಖಿತಾ 4ನೇ ಸ್ಥಾನ, ತನ್ವಿ ಅಂಚನ್ ಪೆರ್ಲಂಪಾಡಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ತರಬೇತಿ ನೀಡುತ್ತಿದ್ದಾರೆ.