ಉಪವಾಸ ಆರೋಗ್ಯಕ್ಕೂ ಉತ್ತಮ









ಪವಿತ್ರ ರಂಝಾನ್ ವರ್ಷದ ಹನ್ನೆರಡು ತಿಂಗಳುಗಳ ನಾಯಕ.ಪವಿತ್ರ ಖುರ್ ಆನ್ ಅವತೀರ್ಣಗೊಂಡ ಪರಮ ಶ್ರೇಷ್ಠ ತಿಂಗಳೇ ರಂಝಾನ್.ಸ್ವರ್ಗದ ಬಾಗಿಲು ತೆರಯಲ್ಪಟ್ಟು ,ನರಕದ ಬಾಗಿಲು ಮುಚ್ಚಲ್ಪಡುವ,ಪಿಶಾಚಿ ಬಂದಿಸಲ್ಪಡುವ ಏಕೈಕ ತಿಂಗಳು ಪವಿತ್ರ ರಂಝಾನ್.ಮನುಷ್ಯನಲ್ಲಿ ತಪ್ಪುಗಳು ಸಹಜ.ಅವನ ಪ್ರತಿಯೊಂದು ಅಂಗಾಂಗಳಿಂದಲೂ ಹೊರ ಚಿಮ್ಮುವ ತಪ್ಪುಗಳಿಗೆ ಲೆಕ್ಕವಿಲ್ಲ.ಈ ತಪ್ಪುಗಳನ್ನು ಮನ್ನಿಸಬೇಕೆಂದೇ ಕರುಣಾಮಯಿಯಾದ ಅಲ್ಲಾಹನು ಪವಿತ್ರ ರಂಝಾನನ್ನು ಕರುಣಿಸಿದ್ದು.ರಮಳಾನ್ ಎಂಬ ಪದದ ಅರ್ಥವೇ ಪಾಪಗಳನ್ನು ಅಳಿಸುವುದು ಎಂದಾಗಿದೆ.ಪ್ರಸ್ತುತ ತಿಂಗಳ ಮಹಿಮೆಯ ಪಟ್ಟಿ ವಿವರಣಾತೀತವಾಗಿದೆ.ಪ್ರತಿಯೊಂದು ಕಡ್ಡಾಯ ಕರ್ಮಕ್ಕೆ ಎಪ್ಪತ್ತು ಏಳುನೂರರಂತೆ ದುಪ್ಪಟ್ಟು ಪ್ರತಿಫಲ ಲಭ್ಯವಾಗುವ ತಿಂಗಳಲ್ಲಿ ಐಚ್ಛಿಕ (ಸುನ್ನತ್) ಕರ್ಮಗಳಿಗೆ ಫರಲ್ (ಕಡ್ಡಾಯ)ಕರ್ಮಗಳ ಪುಣ್ಯ ಲಭ್ಯವಾಗುವುದು.ಮುಸ್ಲಿಮನ ನಿತ್ಯ ಜೀವನದಲ್ಲಿ ಅಳವಡಿಸಬೇಕಾದ ಅದೆಷ್ಟೋ ಐಚ್ಚಿಕ ಕರ್ಮಗಳಿವೆ ಅವುಗಳನ್ನೇ ರಂಝಾನಿನಲ್ಲಿ ಮುಂದುವರಿಸಿದರೆ ಪುಣ್ಯ ಸಂಪಾದನೆಗೆ ಧಾರಾಳ.ರಂಝಾನ್ ಪುಣ್ಯಗಳ ಕೊಯ್ಲುಕಾಲ.ಪ್ರತಿಯೊಂದು ನಿಮಿಷಕ್ಕೂ ಅದರದೇಯಾದ ಮಹತ್ವವಿದೆ.ಖರ್ ಆನ್ ಪಾರಾಯಣ,ಸತ್ಕರ್ಮಗಳ ಮೂಲಕ ಅದನ್ನು ಸದುಪಯೋಗಗೊಳಿಸಬೇಕಿದೆ.ಮನುಷ್ಯನ ಆತ್ಮ ಶುದ್ಧಿ ಪರಮ ಪ್ರಧಾನ.ಹೃದಯದಲ್ಲಿನ ಕಲ್ಮಶಗಳನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ.ಅಹಂಕಾರ,ಅಹಂಬಾವ,ಅಸೂಯೆ,ದ್ವೇಷ,ಹಗೆತನ,ಕಾಪಟ್ಯ,ದುಷ್ಚಿಂತೆ ಮುಂತಾದ ಅನೇಕಾನೇಕ ಹೃದಯ ರೋಗಗಳಿಗೆ ರಂಝಾನ್ ವೃತ ಸಿದ್ದೌಷದವಾಗಿದೆ.ಪ್ರೀತಿ,ವಿಶ್ವಾಸ,ಕರುಣೆ,ಶಾಂತಿ,ಸಹನೆ,ದಾನ ಶೀಲ,ಪರ ಸಹಾಯ,ಸೌಹಾರ್ಧತೆ,ಸಾಹೋದರ್ಯತೆ ಇವುಗಳಿಗೆ ರಂಝಾನಿನಲ್ಲಿ ವಿಶೇಷ ಪ್ರಾಧಾನ್ಯತೆಗಳಿವೆ.ಅಸಭ್ಯ ಮತ್ತು ಅಸತ್ಯ ಮಾತುಗಳು,ಪರಧೂಷಣೆ,ಪರನಿಂದನೆ,ಪರಿಹಾಸ,ಆರೋಪ ಪ್ರತ್ಯಾರೋಪಗಳಿಂದ ದೂರ ಸರಿಯಲೇಬೇಕಾಗಿದೆ.”ಯಾರಾದರೂ ನಿನ್ನನ್ನು ನಿಂದಿಸಿದರೆ ನಾನೊಬ್ಬ ಉಪವಾಸಿಗನೆಂದು ಉತ್ತರಿಸೆಂಬ” ಪ್ರವಾದಿ ಸ.ಅ ರವರ ವಚನವು ಉಪವಾಸಿಗನ ಮಾತುಗಳ ಹಿಡಿತದ ಬಗ್ಗೆ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಎತ್ತಿ ತೋರಿಸುತ್ತಿದೆ. ಅಸಭ್ಯ ಮಾತುಗಳು ಹಾಗೂ ಅನವಶ್ಯಕ ಅಧಾರ್ಮಿಕ ಕರ್ಮಗಳು ಕೈ ಬಿಡದೇ ಕೇವಲ ಅನ್ನಾಹಾರ ಮತ್ತು ಪಾನೀಯಗಳನ್ನು ಕೈ ಬಿಟ್ಟು ಉಪವಾಸಿಗನಾವುದು ಅಲ್ಲಾಹನಿಗೆ ಬೇಕಿಲ್ಲ ಅದರಿಂರ ಯಾವ ಗುಣವೂ ಲಭ್ಯವಾಗದೆಂಬ ಹದೀಸ್ ವಚನ ಶ್ರದ್ಧೇಯ.ಒಟ್ಟಿನಲ್ಲಿ ಅಲ್ಲಾಹನ ಸಂಪ್ರೀತಿ ಗಳಿಸಲು ರಂಝಾನ್ ಉಪವಾಸ ಅತೀ ಸೂಕ್ತ.ಅದರಂತೇ ನಮ್ಮ ರಂಝಾನ್ ಆಚರಣೆಯಾಗಲಿ
ಸರ್ವರಿಗೂ ಒಳಿತಾಗಲಿ
📝 ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ
ಬುಸ್ತಾನುಲ್ ಉಲೂಂ ಮದ್ರಸ ಜಟ್ಟಿಪಳ್ಳ










