ದ.ಕ ಸಂಪಾಜೆ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶ್ರೀ ವಿಷ್ಣು ಸಂಜೀವಿನಿ , ಸ್ತ್ರೀ ಶಕ್ತಿ, ಮಹಿಳಾ ಘಟಕ, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವತಿಯಿಂದ ಮಹಿಳೆಯರಿಗೆ ಕ್ರೀಡಾ ಕೂಟವು ಮಾ.9 ರಂದು ಕಲ್ಲುಗುಂಡಿಯ ಆರ್. ಎಂ ಎಸ್ ಎ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವು ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಿಲ್ಪಾ ಸನತ್ ಅಧ್ಯಕ್ಷತೆ ವಹಿಸಿದರು. ಸಂಪಾಜೆ ಗ್ರಾಂ.ಪಂ ಅಧ್ಯಕ್ಷೆ ಸುಮತಿ ಶಕ್ತಿ ವೇಲು ದೀಪ ಬೆಳಗಿಸಿ ಉದ್ಘಾಟಿಸಿ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಂ.ಪಂ ಉಪಾಧ್ಯಕ್ಷ ಎಸ್. ಕೆ ಹನೀಫ್ , ಮಾಜಿ ಗ್ರಾಂ.ಪಂ ಅಧ್ಯಕ್ಷ ಜಿ. ಕೆ ಹಮೀದ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷೆ ಹಾಗೂ ಗ್ರಾಂ.ಪಂ ಸದಸ್ಯೆ ಯಮುನಾ , ಸದಸ್ಯರಾದ ಸುಂದರಿ ಮುಂಡಡ್ಕ, ರಜನಿ ಶರತ್ ಲಿಸ್ಸಿ ಮೊನಾಲಿಸಾ, ವಿಮಲಾ ಪ್ರಸಾದ್ , ಲಲನಾ , ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಪೇರಡ್ಕ, ಸೌಮ್ಯ ಕಡೆಪಾಲ , ಸವಿತಾ ಕಿಶೋರ್ ಮಹಿಳಾ ಒಕ್ಕೂಟದ ಸರ್ವಸದಸ್ಯರು. ಉಪಸ್ಥಿತರಿದ್ದರು.









ಯಮುನಾ ಸರ್ವರನ್ನು ಸ್ವಾಗತಿಸಿ, ಕಾಂತಿ. ಬಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿ, ಶಿಲ್ಪಾ ಸನತ್ ವಂದಿಸಿದರು.
ಬಳಿಕ ವಿವಿಧ ಮಹಿಳೆಯರಿಗೆ ವಿವಿಧ ಕ್ರೀಡಾ ಕೂಟಗಳು ನಡೆಯಿತು.










