ಕನಕಮಜಲಿನಲ್ಲಿ ಮಹಿಳಾ ದಿನಾಚರಣೆ

0

ಸ್ವರ್ಣ ಮಹಿಳಾ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 9 ರಂದು ಶ್ರೀ ಆತ್ಮ ಭಜನಾ ಮಂದಿರದ ಸಭಾಭವನದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಊರ ಮಹಿಳೆಯರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತದನಂತರ ಸಭಾ ಕಾರ್ಯಕ್ರಮ ನೆರವೇರಿತು. ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ವಾರಿಜಾ ದಾಮೋದರ ಕೋಡ್ತಿಲು ಸಭಾಧ್ಯಕ್ಷತೆ ವಹಿಸಿದ್ದರು.

ಶ್ರೀಮತಿ ಪುಷ್ಪಾವತಿ ದೇವರಗುಂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ಶಾರದಾ ಉಗ್ಗಮೂಲೆ , ಅಧ್ಯಕ್ಷರು ಗ್ರಾಮ ಪಂಚಾಯತ್ ಕನಕ ಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು ಹಾಗೂ ಊರಿನ ಹಿರಿಯ ಮಹಿಳೆಯಾದ ಶ್ರೀಮತಿ ಪಾಚು ( ದೈವಗಳ ಪಾಡ್ದನಗಾರ್ತಿ ) ಇವರನ್ನು ಗೌರವಿಸಲಾಯಿತು. ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ಗುರುಪ್ರಸಾದ್ ಕೆ ಎಸ್ ಅಂಚೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.