ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ಕೊರಗಜ್ಜ ಸಾನಿಧ್ಯದಲ್ಲಿ ಚೋಮ ನಾರ್ಣಕಜೆ ಮತ್ತು ಶೀನ ನಾರ್ಣಕಜೆಯವರ ಕುಟುಂಬದ ಗುಳಿಗ, ಪಾಷಾಣಮೂರ್ತಿ, ಅಣ್ಣಪ್ಪ, ಕೊರಗಜ್ಜ ದೈವಗಳ ನೆಮೋತ್ಸವವು ಮಾ. 8 ಮತ್ತು 9ರಂದು ನಡೆಯಿತು.

ಸಂಜೆ 6 ರಿಂದ ಭಂಡಾರ ತೆಗೆಯುವುದು, ರಾತ್ರಿ ಗುಳಿಗ ದೈವದ ನೇಮ, ಕಲ್ಕುಡ – ಕಲ್ಲುರ್ಟಿ ದೈವದ ನೇಮ, ಪಂಜುರ್ಲಿ ದೈವದ ನೇಮ ನಡೆಯಿತು.















ಬೆಳಿಗ್ಗೆ ಧರ್ಮ ದೈವದ ನೇಮ ಬಳಿಕ ಕೊರಗಜ್ಜ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ನೂರಾರು ಭಕ್ತರು ಆಗಮಿಸಿ ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.










