ತುಳುನಾಡಿನ ಪ್ರಸಿದ್ಧ ದೈವಾರಾಧನೆ ಕೇಂದ್ರವಾದ ಶ್ರೀ ರಾಜ್ಯದೈವ ಮತ್ತು ಶ್ರೀ ಪುರುಷದೈವ ದೈವಸ್ಥಾನ ಕಂದ್ರಪ್ಪಾಡಿ ಶ್ರೀ ಕ್ಷೇತ್ರದ ಕನ್ನಡ ಭಕ್ತಿಗೀತೆ
‘ಪುಣ್ಯಕ್ಷೇತ್ರ ಕಂದ್ರಪ್ಪಾಡಿ’ ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಶ್ರೀ ಕ್ಷೇತ್ರ ಕಂದ್ರಪ್ಪಾಡಿಯ ಆಡಳಿತ ಮುಕ್ತೇಸರರಾದ ಕಾಳಿಕಾ ಪ್ರಸಾದ್ ಮುಂಡೋಡಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.















ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಸದಸ್ಯರು, ಮಾಜಿ ಸದಸ್ಯರು, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಿರಂಜನ್ ಕಡ್ಲಾರುರವರ ಸಾಹಿತ್ಯವಿರುವ ಈ ಭಕ್ತಿಗೀತೆಯನ್ನು ಬಾಲಕೃಷ್ಣ ನೆಟ್ಟಾರು ರವರು ಹಾಡಿರುತ್ತಾರೆ. ಶರತ್ ಬಿಳಿನೆಲೆಯವರ ಸಂಗೀತ, ಇಂದುಧರ ಹಳೆಯಂಗಡಿಯವರ ಸಂಕಲನ, ಮಿಥುನ್ ರಾಜ್ ವಿದ್ಯಾ ಪುರ ರವರ ಸ್ಟುಡಿಯೋ ಚಿತ್ರೀಕರಣ ಹಾಗೂ ರೆಕಾರ್ಡಿಂಗ್ ಮತ್ತು ಮಾಸ್ಟರ್ ರಿಂಗ್ ಯಿದೆ. ಸುದ್ದಿ ಮೀಡಿಯಾ ಸುಳ್ಯ ರವರ ವಿಡಿಯೋ ಕೃಪೆ ಈ ಭಕ್ತಿ ಗೀತೆಗಿದೆ.










