ಮಾ.15ರಂದು ಕನಕಮಜಲು ಗ್ರಾ.ಪಂ.ನಲ್ಲಿ ನೋಂದಣಿ
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಜನ ಸಾಮಾನ್ಯರಿಗೆ ಕೈಗೆಟುವ ಕನಿಷ್ಠ ವಾರ್ಷಿಕ ವಂತಿಗೆಯ ವಿಮಾ ಯೋಜನೆಗಳಾಗಿದ್ದು ಇದನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಮತ್ತು ಈ ಯೋಜನೆಗೆ ನೋಂದಣೆ ಮಾಡಲು,ಕನಕಮಜಲು ಗ್ರಾಮ ಪಂಚಾಯತ್ ನಲ್ಲಿ ಮಾ.15ರಂದು ಅಪರಾಹ್ನ 2-00 ಘಂಟೆಗೆ PMJJBY ಹಾಗೂ PMSBY ಮಹಾ ಲಾಗಿನ್ ದಿವಸ ವನ್ನಾಗಿ ಆಯೋಜಿಸಲಾಗಿದೆ.
ಗ್ರಾಮಸ್ಥರು ಈ ವಿಮಾ ಯೋಜನೆಯನ್ನು ನೋದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಮೂಲಕ ಕೋರಿದೆ. PMJJBY ಯೋಜನೆಯ ವಾರ್ಷಿಕ ವಿಮಾ ಕಂತು ರೂ. 436/-88
PMSBY ಯೋಜನೆಯ ವಾರ್ಷಿಕ ವಿಮಾ ಕಂತು ರೂ. 20/-
ವಿ.ಸೂ: ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವವರು ತಮ್ಮ ಆದಾರ್ ಕಾರ್ಡು ಪ್ರತಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಕಡ್ಡಾಯವಾಗಿ ತರುವುದು.
ಹೆಚ್ಚಿನ ಮಾಹಿತಿಗೆ ಹತ್ತಿರದ ಕೆನರಾ ಬ್ಯಾಂಕ್ ಶಾಖೆ ಹಾಗೂ ಅಂಚೆ ಕಛೇರಿಯನ್ನು ಸಂಪರ್ಕಿಸುವುದು.