Home Uncategorized ಸುಳ್ಯ ಬೈತಡ್ಕ ಸಮೀಪ ಗ್ಯಾಸ್ ಸಿಲಿಂಡರ್ ವಾಹನ ಪಲ್ಟಿ

ಸುಳ್ಯ ಬೈತಡ್ಕ ಸಮೀಪ ಗ್ಯಾಸ್ ಸಿಲಿಂಡರ್ ವಾಹನ ಪಲ್ಟಿ

0

ಸುಳ್ಯ – ಜಾಲ್ಸೂರು‌ಮುಖ್ಯ ರಸ್ತೆಯಲ್ಲಿ ಬೈತಡ್ಕ ತಿರುವಿನಲ್ಲಿ ಗ್ಯಾಸ್ ಸಿಲಿಂಡರ್ ತುಂಬಿದ ವಾಹನ ಮಾ.14ರಂದು ತಡರಾತ್ರಿ ಪಲ್ಟಿಯಾದ ಘಟನೆ ವರದಿಯಾಗಿದೆ.

ಸುಮಾರು 11.30ಕ್ಕೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ‌ವಾಹನ ಪಲ್ಟಿಯಾಯಿತು. ಸುಳ್ಯದಿಂದ ಮಂಗಳೂರು ಕಡೆಗೆ ಹೋಗುವ ವಾಹನ ಇದಾಗಿದ್ದು, ಪಲ್ಟಿಯಾದ ಪರಿಣಾಮ ಗ್ಯಾಸ್ ಸಿಲಿಂಡರ್ ರಸ್ತೆಗೆ ಬಿದ್ದಿದ್ದವು.

ಚಾಲಕನಿಗೆ ಗಾಯವಾಗಿದ್ದು ಆತ ಸುಳ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆನ್ನಲಾಗಿದೆ.

ಪೋಲೀಸರು ಸ್ಥಳಕ್ಕೆ ತೆರಳಿ‌ಮಹಜರು‌ ನಡೆಸಿದ್ದಾರೆ.

NO COMMENTS

error: Content is protected !!
Breaking