ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕಲ್ಲುಗುಂಡಿಯ ರಶ್ಮಿಯವರು ಎಂ.ಎ ಇತಿಹಾಸ ವಿಭಾಗದಲ್ಲಿ ತೃತೀಯ ರ‍್ಯಾಂಕ್ ಪಡೆದಿದ್ದಾರೆ.









ಸಂಪಾಜೆ ಗ್ರಾಮದ ಕಲ್ಲುಗುಂಡಿ ದಂಡಕಜೆಯ ನೆಕ್ಕಿಲ ಶ್ರೀ ಎಲ್ಯಣ್ಣ ಗೌಡ ಮತ್ತು ಶ್ರೀಮತಿ ನಳಿನಿಯವರ ಪುತ್ರಿಯಾಗಿರುವ ಕು. ರಶ್ಮಿ ಎನ್.ಎ ಯವರು, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಹಂಪನಕಟ್ಟೆ, ಮಂಗಳೂರು ಇಲ್ಲಿ ಬಿ.ಎಡ್ ಪದವಿಯನ್ನೂ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸದ್ಯ ಹಾಸನದ ಸ್ಕಾಲರ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿ ಇದರ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.










