ಆಲೆಟ್ಟಿ ಗ್ರಾಮದ ಕುಂಚಡ್ಕದಲ್ಲಿ ಎ.1 ಮತ್ತು 2 ರಂದು ಮಾಮೂಲು ಪ್ರಕಾರ ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತವು ಮಾ.14 ರಂದು ನೆರವೇರಿತು.ದೈವದ ದರ್ಶನ ಪಾತ್ರಿಯವರ ನೇತೃತ್ವದಲ್ಲಿ ತೀಯ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಕೊಳ್ಳಿ ಮುಹೂರ್ತ ನೆರವೇರಿತು.
ಈ ಸಂದರ್ಭದಲ್ಲಿ ಒತ್ತೆಕೋಲ ಸಮಿತಿ ಅಧ್ಯಕ್ಷರು ಹಾಗೂ ಕುಂಚಡ್ಕ ಕುಟುಂಬದ ಹಿರಿಯರು ಮತ್ತು ಸ್ಥಳೀಯರು, ಕುಂಚಡ್ಕ ಕುಟುಂಬಸ್ಥರು,
ಸಮಿತಿ ಸದಸ್ಯರು ಭಾಗವಹಿಸಿದರು.