Home Uncategorized ಮರ್ಕಂಜ : ಬಲ್ನಾಡು ಪೇಟೆ ಶ್ರೀ ಆದಿನಾಥೇಶ್ವರ ಬಸದಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಂಕುಸ್ಥಾಪನೆ

ಮರ್ಕಂಜ : ಬಲ್ನಾಡು ಪೇಟೆ ಶ್ರೀ ಆದಿನಾಥೇಶ್ವರ ಬಸದಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಂಕುಸ್ಥಾಪನೆ

0

ಮರ್ಕಂಜ ಗ್ರಾಮದ ಬಲ್ನಾಡು ಪೇಟೆ ಶ್ರೀ ಆಧಿನಾಥೇಶ್ವರ ಬಸದಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಂಕುಸ್ಥಾಪನೆಯು ಮಾ. 27ರಂದು ನಡೆಯಿತು.
ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ, ಉಪಾಧ್ಯಕ್ಷೆ ಸಂಧ್ಯಾ ಪಾರೇಮಜಲು ಸೇವಾಜೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು , ಮರ್ಕಂಜ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಪುರ, ಹಿರಿಯರಾದ ಯುವರಾಜ ಜೈನ್ ಬಲ್ನಾಡುಪೇಟೆ ಮತ್ತು ಪ್ರಮುಖರಾದ ರಾಘವ ಗೌಡ ಕಂಜಿಪಿಲಿ, ಮಹಾವೀರ ಜೈನ್ ಬಲ್ನಾಡುಪೇಟೆ, ಕೃಷ್ಣಯ್ಯ ಮೂಲೆತೋಟ, ವೆಂಕಟ್ರಮಣ ಅಂಗಡಿಮಜಲು ಹಾಗೂ ರಸ್ತೆಯ ಫಲಾನುಭವಿಗಳು ಭಾಗವಹಿಸಿದ್ದರು. ಪದ್ಮನಾಭ ಜೈನ್ ಬಲ್ನಾಡು ಪೇಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಗೋವಿಂದ ಅಳವುಪಾರೆ ವಂದಿಸಿದರು.

NO COMMENTS

error: Content is protected !!
Breaking