ರಸ್ತೆಯಲ್ಲೆಲ್ಲಾ ಚೆಲ್ಲಿದ ಮಣ್ಣು, ಸಂಕಷ್ಟ ಅನುಭವಿಸುತ್ತಿರುವ ಸಾರ್ವಜನಿಕರು

ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಾಗಿ ಪೈಪ್ ಗಳ ಅಳವಡಿಕೆ ಬಹಳ ಸಮಯದಿಂದ ನಡೆಯುತ್ತಿದೆ.
ಈ ಕಾಮಗಾರಿ ಆರಂಭ ಆದ ದಿನಗಳಿಂದ ಸಾರ್ವಜನಿಕರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಿದೆ.








ಇದೀಗ ಜಯನಗರ ಪರಿಸರದಲ್ಲಿ ನೀರಿನ ಪೈಪ್ ಅಳವಡಿಕೆಗೆ ಕಣಿಗಳನ್ನು ತೆಗೆಯಲಾಗುತಿದ್ದು, ಜಯನಗರ ನೀರಿನ ಟ್ಯಾಂಕ್ ಗೆ ಸಂಪರ್ಕಿಸುವ ರಸ್ತೆ ಕಿರಿದಾಗಿರುವ ಹಿನ್ನೆಲೆಯಲ್ಲಿ ಜೆ ಸಿ ಬಿ ಯಿಂದ ಕಣಿ ತೆಗೆದ ಬಳಿಕ ಸಮರ್ಪಕವಾಗಿ ಅದನ್ನು ಸರಿ ಪಡಿಸದೆ ರಸ್ತೆ ತುಂಬಾ ಮಣ್ಣು ಹರಡಿ ನಿಂತಿದೆ.

ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ನಡೆದಾಡಲು ಸಂಕಷ್ಟ ಪಡುವ ರೀತಿಯಲ್ಲಿ ಪರಿಸರ ನಿರ್ಮಾಣವಾಗಿದೆ.
ಆದುದರಿಂದ ಸಂಬಂಧ ಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.










