ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ ಸಂಯೋಜನೆಯಲ್ಲಿ ರಂಜಿಸಿದ “ಸಾಕೇತ ಸಾಮ್ರಾಜ್ಞಿ” ಯಕ್ಷಗಾನ ಬಯಲಾಟ ಪ್ರದರ್ಶನ

0

ತೆಂಕುತಿಟ್ಟಿನ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಮೇಳದ ಕಲಾವಿದರಿಂದ ವಾಸುದೇವ ರಂಗಾಭಟ್ ಮಧೂರು ರವರ ಕಥಾ ಸಂಯೋಜನೆ ಹಾಗೂ ಪ್ರಸಾದ್ ಮೊಗಬೆಟ್ಟು ಪದ್ಯ ರಚನೆಯ ವರ್ಷದ ದಾಖಲೆ ನಿರ್ಮಿಸಿರುವ ಸಾಕೇತ ಸಾಮ್ರಾಜ್ಞಿ” ಎಂಬ ಯಕ್ಷಗಾನ ಬಯಲಾಟವು ಎ.9 ರಂದು ಸಂಜೆ ಚೆನ್ನಕೇಶವ ದೇವಸ್ಥಾನದ ಒಳಾಂಗಣ ಸಭಾಭವನದಲ್ಲಿ ಪ್ರದರ್ಶನವಾಯಿತು.

ಯಕ್ಷಗಾನ ಕಲಾವಿದ ಸಂಯೋಜಕ ಶೇಖರ ಮಣಿಯಾಣಿ ಯವರ ಸಂಯೋಜನೆಯಲ್ಲಿ
ಕಾಲಮಿತಿ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿತ್ತು.
ಚೆನ್ನಕೇಶವ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಆಯೋಜಿಸಿದ ಯಕ್ಷಗಾನ ಬಯಲಾಟಸಂಜೆಯಾಗುತ್ತಲೇ ಮಳೆ
ಆರಂಭಗೊಂಡಿದ್ದರಿಂದ ಪ್ರೇಕ್ಷಕರ ಬೇಡಿಕೆಯಂತೆ ದೇವಸ್ಥಾನದ ಒಳಾಂಗಣ ಸಭಾಭವನದಲ್ಲಿ ಯಕ್ಷಗಾನ ಪ್ರದರ್ಶನ ಆರಂಭವಾಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ದೇಲಂತಮಜಲು ಸುಬ್ರಹ್ಮಣ್ಯ ಭಟ್,ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಲ್ ರಾವ್ ಪುತ್ತಿಗೆ, ನಿಶ್ವತ್ ಜೋಗಿ, ಪಾತ್ರಧಾರಿಗಳಾಗಿ ಸಂತೋಷ್ ಕುಮಾರ್ ಹಿಲಿಯಾಣ, ಸತೀಶ್ ನೀರ್ಕರೆ, ಮಹೇಶ್ ಎಡನೀರು, ಸೀತಾರಾಮ ಕಟೀಲು, ಮೋಹನ ಮುಚೂರು,ಪ್ರಸಾದ್ ಸವಣೂರು ಹಾಗೂ ಪ್ರಧಾನ ಭೂಮಿಕೆಯಲ್ಲಿ ಪ್ರಸಿದ್ಧ ಕಲಾವಿದರು ಭಾಗವಹಿಸಿದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಕಲಾಭಿಮಾನಿಗಳು ಯಕ್ಷಗಾನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.