ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಭಗವಾನ್ ಸಂಘದಿಂದ ಕೊಡುಗೆ

0

 ತಾ.12 ರಂದು ನಡೆಯಲಿರುವ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಹಿನ್ನೆಲೆಯಲ್ಲಿ ಚೆಂಬು ಶ್ರೀ ಭಗವಾನ್ ಸಂಘದಿಂದ ದೇವಸ್ಥಾನಕ್ಕೆ ಒಂದು ಕೈಗಾಡಿಯನ್ನು ಕೊಡುಗೆಯಾಗಿ ನೀಡಲಾಯಿತು.








ಇಂದು ತಾ.10 ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಗೌರವಾದ್ಯಕ್ಷರಾದ ಶ್ರೀ. ಅನಂತ್ ಊರುಬೈಲುರವರು ಕೊಡುಗೆಯನ್ನು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.ದೇವಸ್ಥಾನದ ಮೊಕ್ತೇಸರರಾದ ಶ್ರೀ ಎಂ.ಬಿ.ಸದಾಶಿವರವರು ಮಾತನಾಡಿ ಶ್ರೀ ಭಗವಾನ್ ಸಂಘವು ದೇವಸ್ಥಾನಕ್ಕೆ ನೀಡಿಕೊಂಡು ಬಂದಿರುವ ನೆರವುಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷ ಶ್ರೀ. ಪ್ರಶಾಂತ್ ಊರುಬೈಲು ಮತ್ತು ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿಯ ಅದ್ಯಕ್ಷ ಶ್ರೀ ಜಯಕುಮಾರ್ ಚಿದ್ಕಾರ್ ,ಕಾರ್ಯದರ್ಶಿ ಶ್ರೀ. ಕೇಶವ ಚೌಟಾಜೆ ಮತ್ತು ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.