ರೈಟ್ ಟು ಲಿವ್ (ಕೋಟೆ ಫೌಂಡೇಶನ್) ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ

0

ರೈಟ್ ಟು ಲಿವ್ (ಕೋಟೆ ಫೌಂಡೇಶನ್) ನ ಆಶ್ರಯದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಸಂಸ್ಥೆಯಾದ ಸ್ಫೂರ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರವು ಎಂ.ಬಿ ಫೌಂಡೇಶನ್ ಸಹಯೋಗದಲ್ಲಿ ಸಾಂದೀಪ್ ಶಾಲೆಯಲ್ಲಿ ಏ. 9ರಂದು ಶುಭಾರಂಭಗೊಂಡಿದೆ.

ಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಂ.ಬಿ ಫೌಂಡೇಶನ್ ನ ಮುಖ್ಯಸ್ಥರಾದ ಎಂ.ಬಿ ಸದಾಶಿವ, ಶಾಲೆಯ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ,ರೈಟ್ ಟು ಲಿವ್ (ಕೋಟೆ ಫೌಂಡೇಶನ್) ನ ಸಾಯಿ ರಂಜನ್, ಪ್ರದೀಪ್ ಕೆ, ಶೈಲಶ್ರೀ ಟಿ, ಸಂಸ್ಥೆಯ ಸಂಯೋಜಕರಾದ ವೆಂಕಟ್ರಾಜ್ ಸಿ.ಎಸ್, ಮತ್ತಿತರು ಉಪಸ್ಥಿತರಿದ್ದರು.


ಈ ಕೇಂದ್ರದಲ್ಲಿ ಸಾರ್ವಜನಿಕರು ಉಚಿತವಾಗಿ ಕಂಪ್ಯೂಟರ್ ತರಬೇತಿಯನ್ನು ಪಡೆಯಬಹುದು.