ಚೊಕ್ಕಾಡಿಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ನೂತನ ಶಾಖೆಯ ಉದ್ಘಾಟನೆ

0

ಚೊಕ್ಕಾಡಿಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ನೂತನ ಶಾಖೆಯು ಎ. 09 ರಂದು ಶ್ರೀ ರಾಮ ದೇವಾಲಯ ಚೊಕ್ಕಾಡಿಯಲ್ಲಿ ಉದ್ಘಾಟನೆಗೊಂಡಿತು.
ಶ್ರೀ ರಾಮ ದೇವಾಲಯ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ಶಾಖೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಯೂರಿ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಹೇಮಾವತಿ,ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಪಾರ್ವತಿ ನೇಣಾರುಉಪಸ್ಥಿತರಿದ್ದರು.ಯೋಗ ಶಿಕ್ಷಕ ಸಂತೋಷ್ ಮುಂಡಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಪ್ರಶ್ವಿಜಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.
ತರಗತಿಗೆಬಂದವಿದ್ಯಾರ್ಥಿಗಳಿಗೆ ಯೋಗ ತರಗತಿ ನಡೆಸಿಕೊಡಲಾಯಿತು. ಪ್ರತೀ ಬುಧವಾರ ಸಂಜೆ 5.00 ರಿಂದ 6.00 ರವರೆಗೆ ಯೋಗ ತರಗತಿಗಳನ್ನು ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದರು.