ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಗೆ ಎ.26 ರಂದು ಚುನಾವಣೆ ನಡೆಯಲಿದ್ದು ಈ ಹಿಂದೆ ಸುಳ್ಯ ತಾಲೂಕಿಗೆ ಒಳಪಟ್ಟಿದ್ದು ಈಗ ಕಡಬ ತಾಲೂಕಿಗೆ ಒಳಪಟ್ಟಿರುವ ಏನೆಕಲ್ಲು ಗ್ರಾಮದ ಸಹಕಾರಿ ಧುರೀಣ ಭರತ್ ನೆಕ್ರಾಜೆಯವರನ್ನು ಸುಳ್ಯ ತಾಲೂಕು ವ್ಯಾಪ್ತಿಯ ಅಭ್ಯರ್ಥಿಯಾಗಿ ಸಹಕಾರ ಭಾರತಿ ಆಯ್ಕೆ ಮಾಡಿದೆ.
ಇಂದು ಅವರು ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.















ಭರತ್ ನೆಕ್ರಾಜೆಯವರು ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದು, ಯೇನೆಕಲ್ಲು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾಗಿದ್ದಾರೆ. ಗುತ್ತಿಗಾರು ರಬ್ಬರ್ ಸೊಸೈಟಿಯ ನಿರ್ದೇಶಕರೂ ಆಗಿದ್ದಾರೆ.










