ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಬೇಸಿಗೆ ಶಿಬಿರ ವೇದಿಕೆ : ಜಾಕೆ ಮಾಧವ ಗೌಡ

0


ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಮತ್ತು ಕಲಾ ಮಂದಿರ್ ಡ್ಯಾನ್ಸ್ ಕ್ರೀವ್ ಪಂಜ ಇವುಗಳ ಸಹಯೋಗದಲ್ಲಿ ನಡೆಯುತ್ತಿರುವ ನಲಿ-ಕಲಿ ಮಕ್ಕಳ ಬೇಸಿಗೆ ಶಿಬಿರದ ಆರನೇ ದಿನ ಹಿರಿಯ ಸಹಕಾರಿ ಲ.ಜಾಕೆ ಮಾಧವ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಮಕ್ಕಳ ಪ್ರತಿಭೆಗಳಿಗೆ ಇಂತಹ ಬೇಸಿಗೆ ಶಿಬಿರ ಉತ್ತಮ ವೇದಿಕೆಯಾಗುತ್ತದೆ’ ಎಂದು ಶುಭ ಹಾರೈಸಿ ಮಾತನಾಡಿದರು. ಖ್ಯಾತ ಗಾಯಕಿ ಸುಮಾ ಕೋಟೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಅಶೋಕ್ ಬೆಳ್ಳಾರೆ, ನಿಶ್ಮಿತಾ, ಭಾಗ್ಯಶ್ರೀ, ಸಂಧ್ಯಾ, ವಾಣಿಶ್ರೀ ಮತ್ತು ಭವಾನಿ ಕಾಂಚಣ ನೃತ್ಯ ಹಾಗೂ ನಾಟಕ ತರಬೇತಿ ನೀಡಿದರು.