ಸ್ಥಳೀಯರ ಮನವಿ ಹಾಗೂ ಸುದ್ದಿ ವರದಿಯ ಫಲಶೃತಿ

ಆರ್ತಾಜೆ ಪರಿಸರದಲ್ಲಿ ಸುಮಾರು ತಿಂಗಳುಗಳಿಂದ ಪದೇ ಪದೇ ಕಾಡುತ್ತಿದ್ದ ಲೋ ವೋಲ್ಟೇಜ್ ಸಮಸ್ಯೆಗೆ ಮೆಸ್ಕಾಂ ವತಿಯಿಂದ ನೂತನ ಟಿ ಸಿ ಅಳವಡಿಸುವ ಮೂಲಕ ಸ್ಪಂದಿನೆ ದೊರಕಿದೆ.









ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಮೆಸ್ಕಾಂ ಇಲಾಖೆಗೆ ಮನವಿ ನೀಡಿ ಸಮಸ್ಯೆ ಬಗ್ಗೆ ತಿಳಿಸಿದ್ದರು ಅಲ್ಲದೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯುತ್ ಲೋ ವೋಲ್ಟೇಜ್ ಕಾರಣ ಸ್ಥಳೀಯ ನಿವಾಸಿಗಳು ಸಂಕಷ್ಟದಲ್ಲಿರುವ ಬಗ್ಗೆ ಸುದ್ದಿ ವೆಬ್ಸೈಟ್ ನಲ್ಲಿ ವರದಿ ಪ್ರಕಟಿಸಲಾಗಿತ್ತು.
ಮೆಸ್ಕಾಂ ಇಲಾಖೆಗೆ ಮನವಿಯನ್ನು ನೀಡಿದಾಗ ಜೆ.ಈ ಯವರು 3 ಪಿ ಸಿ ಲೈನ್ ಅಳವಡಿಕೆ ಮಾಡುದಾಗಿ ಭರವಸೆ ನೀಡಿದ್ದರು.
ಇದೀಗ ಏ. 17 ರಂದು ಮೆಸ್ಕಾಂ ಇಲಾಖೆ ನೂತನ ಟಿ ಸಿ ಅಳವಡಿಸಿ ಸ್ಥಳೀಯರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಿದೆ.










