ಸುಳ್ಯದ ಎಲ್ಲಾ ಕ್ಷೇತ್ರದ ಸಾಧಕರಲ್ಲಿ ಜೇಸಿಸ್ ಪಾತ್ರ ಗಮನಾರ್ಹವಾದದ್ದು :ದಿನೇಶ್ ಮಡಪ್ಪಾಡಿ
ಸಹಕಾರ ಮಹಾ ಮಂಡಳಿಗೆ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾದ ದ.ಕ ಮತ್ತು ಉಡುಪಿ ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್,ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ರಾಗಿ ಕರ್ನಾಟಕ ಸರ್ಕಾರ ದಿಂದ ನೇಮಕ ಗೊಂಡ ಕೆ. ಎಂ. ಮುಸ್ತಫ, 2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗೋಕುಲ್ ದಾಸ್ ರವರಿಗೆ ಸುಳ್ಯ ಪಯಸ್ವಿನಿ ಸೀನಿಯರ್ ಜೇಸಿಸ್ ವತಿಯಿಂದ ಸನ್ಮಾನಿಸಲಾಯಿತು.









ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ನಂಜೆ ವಹಿಸಿದ್ದರು.
ಅಭಿನಂದನಾ ಭಾಷಣ ಮಾಡಿದ ದಿನೇಶ್ ಮಡಪ್ಪಾಡಿರವರು ‘ಸುಳ್ಯದ ಎಲ್ಲಾ ಕ್ಷೇತ್ರದ ಬೆಳವಣಿಗೆಯಲ್ಲಿ ಜೇಸಿ ಯ ಹೆಜ್ಜೆ ಗುರುತುಗಳಿವೆ. ವ್ಯಕ್ತಿತ್ವ ವಿಕಸನ,ನಾಯಕತ್ವ ತರಬೇತಿಯ ಫಲಿತಾಂಶ ಈ ಮೂವರು ಸಾಧಕರ ಮೂಲಕ ಸಾಕಾರ ಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜೇಸಿ ಸ್ಥಾಪಕಾಧ್ಯಕ್ಷ ಧನoಜಯ ಮದುವೆಗೆದ್ದೆ, ಜೇಸಿ ಪೂರ್ವಾಧಕ್ಷರುಗಳಾದ ಕೆ. ಆರ್. ಗಂಗಾಧರ್, ಸೀತಾರಾಂ ಕೇವಳ, ಸೀನಿಯರ್ ಜೇಸಿಸ್ ಕಾರ್ಯದರ್ಶಿ ಎ. ಕೆ. ಮೋಹನ್, ಖಜಾಂಜಿ ಅಶೋಕ್ ಚೂಂತಾರು, ದೊಡ್ಡಣ್ಣ ಬರಮೇಲು, ದೇವಿಪ್ರಸಾದ್ ಕುದ್ಪಾಜೆ, ನಿಕಟ ಪೂರ್ವ ಅಧ್ಯಕ್ಷ ಪಿ. ಎಸ್. ಗಂಗಾಧರ್, ಚಂದ್ರಶೇಖರ ಪೆರಾಲು,ದಿನೇಶ್ ಅಂಬೆಕಲ್ಲು, ಎಸ್. ಆರ್ ಸೂರಯ್ಯ, ಮೊದಲಾದವರು ಉಪಸ್ಥಿತರಿದ್ದರು.










