














ಗೌಡ ಸಾರಸ್ವತ ಸಮಾಜದ 18 ಪೇಟೆ ದೇವಸ್ಥಾನಗಳಲ್ಲೊಂದಾದ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವೈಶಾಖ ಪೂರ್ಣಿಮಾ ಮಹೋತ್ಸವಗಳು ಮೇ. 12ರಂದು ನಡೆಯಲಿದೆ.
ಬೆಳಿಗ್ಗೆ 8-30ಕ್ಕೆ ಪ್ರಾರ್ಥನೆ, ವೆಂಕಟರಮಣ ದೇವರಿಗೆ ದ್ವಾದಶಕಲಶಾಭಿಷೇಕ, 10-00ರಿಂದ ಸಂಪ್ರೋಕ್ಷಣೆ, ಸಾನ್ನಿಧ್ಯ ಹವನ, ಮಧ್ಯಾಹ್ನ 12 ಗಂಟೆಯಿಂದ ಉಭಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭೂರಿಸಮಾರಾಧನೆ ನಡೆಯಲಿದೆ.
ರಾತ್ರಿ ಗಂಟೆ 8-00ಕ್ಕೆ ಶ್ರೀ ವೆಂಕಟರಮಣ ದೇವರ ಪೇಟೆ ಸವಾರಿ, ಪಲ್ಲಕಿ ಉತ್ಸವ, ವಸಂತೋತ್ಸವ, ಪ್ರಸಾದ ವಿತರಣೆ ಬಳಿಕ ಬಲಿಪ್ರದಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ










