ಕಾಂಗ್ರೆಸ್ ಸರಕಾರದಿಂದ ಹಿಂದೂ ಸಮಾಜಕ್ಕೆ ರಕ್ಷಣೆ ಇಲ್ಲ : ವೆಂಕಟ್ ವಳಲಂಬೆ

0

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ದುಷ್ಕರ್ಮಿಗಳು ಕೊಂದಿರುವುದು ಅತ್ಯಂತ ನೋವಿನ ಸಂಗತಿ. ಜಿಹಾದಿ ಶಕ್ತಿಗಳು ಕಾಶ್ಮೀರದಲ್ಲಿ ಯಾವ ರೀತಿ ಧಾಳಿ ಮಾಡಿದ್ದಾರೋ ಅದೇ ರೀತಿಯ ಪರಿಸ್ಥಿತಿ ಮಂಗಳೂರಿನಲ್ಲಿ ನಡೆದಿದೆ. ಸುಹಾಸ್ ಶೆಟ್ಟಿ ಎಂಬ ಪ್ರಾಮಾಣಿಕ ಕಾರ್ಯಕರ್ತ ಹಿಂದೂ ಸಮಾಜಕ್ಕೋಸ್ಕರ ದುಡಿದ ಯುವಕ. ಆತನ ಹತ್ಯೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ವಿಹೆಚ್ ಪಿ ಸ್ವಯಂ ಪ್ರೇರಿಯ ಬಂದ್ ಗೆ ಕರೆ ನೀಡಿದೆ. ನಾವು ಕೂಡಾ ಸಹಕಾರವನ್ನು ಯಾಚಿಸಿದ್ದು ಸುಳ್ಯದಲ್ಲಿ ಎಲ್ಲರೂ ಸಹಕಾರ ನೀಡಿದ್ದಾರೆ.
ಇಂತಹ ಘಟನೆಯನ್ನು ನಡೆಯುವಲ್ಲಿ ರಾಜ್ಯ ಸರಕಾರದ ವೈಫಲ್ಯ ಸಂಪೂರ್ಣ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ಸಮಾಜಕ್ಕೆ ರಕ್ಷಣೆ ಇಲ್ಲವಾಗಿದೆ. ಗ್ಯಾರಂಟಿ ಗ್ಯಾರಂಟಿ ಎಂದು ಹೇಳುತ್ತಿರುವ ಸರಕಾರ ಜನರ ಜೀವಕ್ಕೆ ಗ್ಯಾರಂಟಿ ನೀಡುತ್ತಿಲ್ಲ ಎಂದು ವೆಂಕಟ್ ವಳಲಂಬೆ ಹೇಳಿದರು
.