ಬಾಳುಗೋಡು ಪನ್ನೆ ಶ್ರೀ ಇರ್ವರು ಉಳ್ಳಾಕುಲು ಮತ್ತು ಸಪರಿವಾರ ದೈವದ ನೇಮೋತ್ಸವ

0

ಇರ್ವರು ಉಳ್ಳಾಕುಲು ಮತ್ತು ಸಪರಿವಾರ ದೈವಸ್ಥಾನ ಪನ್ನೆ ಬಾಳುಗೋಡು ಇದರ ವಾರ್ಷಿಕ ನೇಮೋತ್ಸವು ಎ.30ರಂದು ಹಾಗು ಮೆ 1 ರಂದು ನಡೆಯಿತು.
ಎ.23ರಂದು ಗೊನೆ ಮುಹೂರ್ತ ನೆರವೇರಿ, ಎ.30ರಂದು ಬೆಳಿಗ್ಗೆ ಚಾವಡಿಯಲ್ಲಿ ಗಣಹೋಮ,ಸಂಜೆ ಮಾಡಕ್ಕೆ ಭಂಡಾರ ಹೊರಡುವುದು. ಎ.1ರಂದು ಬೆಳಗ್ಗಿನಿಂದ ಉಳ್ಳಾಕುಲು,ಪುರುಷ ದೈವ,ಹೊಸಳಿಗಮ್ಮ,ರುದ್ರಾಂಡಿಧರ್ಮದೈವ,ವರ್ಣರ , ಪಂಜುರ್ಲಿ,ಪೊಟ್ಟದೈವದ ನೇಮೋತ್ಸವ ನಡೆಯಿತು.
ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ಸಮಿತಿಯ ಗೌರಾದ್ಯಕ್ಷರು,ಅಧ್ಯಕ್ಷರು, ಪದಾಧಿಕಾರಿಗಳು, ಭಕ್ತಾದಿಗಳು ಹಾಜರಿದ್ದರು
.