














ಎಸ್.ಎಸ್.ಎಲ್.ಸಿ.ಫಲಿತಾಂಶ ಪ್ರಕಟಗೊಂಡಿದ್ದು, ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಗೆ ಶೇ.79 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 10ಮಂದಿ ಹುಡುಗರಲ್ಲಿ 6 ಮಂದಿ, 9 ಮಂದಿ ಹುಡುಗಿಯರಲ್ಲಿ ಎಲ್ಲರೂ ತೇರ್ಗಡೆ ಹೊಂದಿದ್ದಾರೆ.
ದುಗ್ಗಲಡ್ಕದ ಸುಬ್ರಹ್ಮಣ್ಯ ಎ.ಮತ್ತು ಪ್ರಿಯಾ ಎಂ.ದಂಪತಿಯ ಪುತ್ರಿ ಅಖಿಲ ಎಂ.( 584), ದುಗ್ಗಲಡ್ಕದ ಮೊಹಮ್ಮದ್ ಕೆ.ಮತ್ತು ಸಕೀನಾ ದಂಪತಿಯ ಪುತ್ರಿ ಫಾತಿಮತ್ ಜೆಝಿಲ(581),ಮೂಡೆಕಲ್ಲು ಸತ್ಯನಾರಾಯಣ ಮತ್ತು ಪೂರ್ಣಿಮ ದಂಪತಿಯ ಪುತ್ರಿ ಪ್ರೇಕ್ಷಾ ಎ.ಎಸ್.( 580), ನೀರಬಿದಿರೆ ಬಿ.ನಾರಾಯಣ ಮತ್ತು ಕುಶಲ ಪಿ.ದಂಪತಿಯ ಪುತ್ರ ಹರಿಪ್ರಸಾದ್ ಬಿ.ಎನ್.( 553), ದುಗ್ಗಲಡ್ಕದ ಶರೀಫ್ ಕೆ.ಎಂ.ಮತ್ತು ಹಾಜಿರಾ ಕೆ.ಎನ್.ದಂಪತಿಯ ಪುತ್ರಿ ಆಯಿಷತ್ ಶಮ್ನ (533) ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.










