8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುವ ಎನ್.ಎಂ.ಎಂ.ಎಸ್. ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ 3 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.








ಅಮರಮೂಡ್ನೂರು ಗ್ರಾಮದ ಕುಂಟಿಕಾನ ಮನೆ ಸತೀಶ್ ಆಚಾರ್ಯ ಮತ್ತು ಪುಣ್ಯ ದಂಪತಿಗಳ ಪುತ್ರಿ ವಿನಮ್ರ ಕೆ. ಎಸ್, ಕುಂಟಿಕಾನ ಮನೆ ಚಂದ್ರಶೇಖರ ಮತ್ತು ಗೀತಾ ದಂಪತಿಗಳ ಪುತ್ರ ಅಕ್ಷಯ್ ಕೆ.ಸಿ, ಕುಕ್ಕುಜಡ್ಕ ರಾಘವ ಆಚಾರ್ಯ ಮತ್ತು ಸುಶೀಲ ದಂಪತಿಗಳ ಪುತ್ರಿ ಗಾನವಿ ಆರ್.ಕೆ ಮುಂದಿನ 4 ವರ್ಷಗಳ ಕಾಲ 12,000ದಂತೆ 48,000 ರೂಪಾಯಿಗಳ ಸ್ಕಾಲರ್ ಶಿಪ್ ನ್ನು ಪಡೆಯುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಅಧ್ಯಾಪಕ ವೃಂದದವರು ತರಬೇತಿಯನ್ನು ನೀಡಿರುತ್ತಾರೆ.










