ಮೇ.೧೪ರಂದು ತೊಡಿಕಾನ ಶ್ರೀ ಪಾಷಾಣಮೂರ್ತಿ ಅಮ್ಮನವರ ಸಮ್ಮಾನ

0

ಹಲವು ಬದಲಾವಣೆಗಳೊಂದಿಗೆ ಸಮ್ಮಾನ ನಡೆಸಲು ದೇವಳದ ಆಡಳಿತ ತೀರ್ಮಾನ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತದಡಿಯಲ್ಲಿ ನಡೆಯುವ ಶ್ರೀ ಪಾಷಾಣ ಮೂರ್ತಿ ಅಮ್ಮನವರ ಸಮ್ಮಾನ ಕಾರ್ಯಕ್ರಮ ಮೇ.14 ರಂದು ನಡೆಯಲಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಈ ಬಾರಿಯಿಂದ ಹಲವು ಬದಲಾವಣೆ ಮಾಡಲಾಗಿದೆ.

ಸಮ್ಮಾನ ಕೊಡುವವರು ಆ ದಿನ ಬೆಳಿಗ್ಗೆ 8.3೦ಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಹಿಂದೆ ಸಮ್ಮಾನ ಕೊಡುವವರು ಕೋಳಿಯನ್ನು ಅವರೇ ತಂದು ಆಗೇಲಿನ ತಯಾರಿ ಯಲ್ಲಿ ತೊಡಗಿಸಿ ಕೊಳ್ಳಬೇಕಿತ್ತು ಆದರೆ ಹೆಚ್ಚಿನ ಭಕ್ತರು ಹರಿಕೆ ನೀಡಿ ತೆರಳುತ್ತಿದ್ದ ಕಾರಣ ಕೆಲವೇ ಮಂದಿಗೆ ಹೆಚ್ಚಿನ ಕೆಲಸದ ಹೊರೆ ಬೀಳುತಿತ್ತು.
ಅದನ್ನು ಬದಲಾವಣೆ ಮಾಡಿ ಸಮ್ಮಾನಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು ಕೋಳಿ ಸಹಿತ ದೈವಸ್ಥಾನದ ವತಿಯಿಂದಲೇ ಪೂರೈಸಲಾಗುತ್ತದೆ.ಅಗೇಲಿಗೆ ಸಂಬಂಧಪಟ್ಟಂತೆ ಸರ್ವ ತಯಾರಿ ಕಾರ್ಯವನ್ನು ದೈವಸ್ಥಾನದ ವತಿಯಿಂದಲೇ ನಿರ್ವಹಿಸಲಾಗುತ್ತದೆ. ದೈವಸ್ಥಾನದ ಕೌಂಟರ್ ನಿಂದ ಹೊರತುಪಡಿಸಿ ಇತರ ಕಡೆಗಳಿಂದ ಕೋಳಿಗಳನ್ನು ಖರೀದಿಸಿ ತಂದಲ್ಲಿ ಅಂತಹ ಹರಕೆಗಳನ್ನು ಸ್ವೀಕರಿಸದೇ ಇರಲು ತೀರ್ಮಾನಿಸಲಾಗಿದೆ.
ಸಮ್ಮಾನ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯಲು ಈ ಬದಲಾವಣೆ ಮಾಡಲಾಗಿದೆ.ಇದರಿಂದಾಗಿ ಭಕ್ತಾಧಿಗಳಿಗೆ ಅನುಕೂಲವಾಗಲಿದೆ.ಈ ವ್ಯವಸ್ಥೆಗೆ ಎಲ್ಲರೂ ಸಹಕರಿಸಬೇಕೆಂದು ಆಡಳಿತ ಮಂಡಳಿಯವರುವಿನಂತಿಸಿದ್ದಾರೆ