ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ

0

*ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ* ಉಗ್ರರ ಮತ್ತು ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರಿಗೆ ಎಲ್ಲಾ ರೀತಿಯ ಜಯ ಸಿಗುವಂತಾಗಲಿ ಎಂದು ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಿತು.ಭಾರತೀಯ ಸೈನಿಕರ ಕ್ಷೇಮಾಭಿವೃದ್ಧಿ, ಸೇನೆಗೆ ಇನ್ನಷ್ಟು ಶಕ್ತಿಯನ್ನು ಭಗವಂತ ಕರುಣಿಸಲಿ, ಉಗ್ರರ ಧಮನವಾಗಲಿ ಎಂಬ ಆಶಯದೊಂದಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.ಸೈನಿಕರಿಗೆ ಎಲ್ಲಾ ರೀತಿಯ ಜಯ ಸಿಗಲಿ ಎಂದು ಪ್ರಾರ್ಥಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಗೌರವ ಸಲಹೆಗಾರರಾದ ಕಂಬಳ ಆನಂದ ಗೌಡ ಪರಮೇಶ್ವರ ಬಿಳಿಮಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ್ ಗರಡಿ , ಸಂತೋಷ್ ಕುಮಾರ್ ರೈ, ಧರ್ಮಪಾಲ ಗೌಡ ಕಾಚಿಲ, ಪವಿತ್ರ ಮಲ್ಲೆಟ್ಟಿ, ಭಾರತೀಯ ಸೇನೆಯ ನಿವೃತ್ತ ಯೋಧರಾದ ವಾಸುದೇವ ಬಾನಡ್ಕ, ಪದ್ಮನಾಭ ಬೊಳ್ಳಾಜೆ, ಊರ ಗಣ್ಯರಾದ ಗಂಗಾಧರ ಶಾಸ್ತ್ರಿ ಪುತ್ಯ, ಸೀಮೆಯ ಭಕ್ತರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ರಾಮಚಂದ್ರ ಭಟ್ ಪೂಜೆ ನೆರವೇರಿಸಿದರು.