ಈ ಬಾರಿಯ ಎನ್.ಎಮ್.ಎಮ್.ಎಸ್. ವಿದ್ಯಾರ್ಥಿ ವೇತನಕ್ಕೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ 8 ನೇ ತರಗತಿಯ 5 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳಲ್ಲಿ ರೂ.48,000/- ವಿದ್ಯಾರ್ಥಿ ವೇತನವನ್ನು ಪಡೆಯಲಿದ್ದಾರೆ.








ಕಲ್ಲಪಳ್ಳಿಯ ಚಿದಾನಂದ ಜಿ ಮತ್ತು ಸೌಮ್ಯ ಕೆ ರವರ ಪುತ್ರಿ ಆತ್ಮಿಕಾ ಜಿ.ಸಿ. 106 ಅಂಕ ಪಡೆದಿದ್ದು ತಾಲೂಕಿಗೆ ದ್ವಿತೀಯಸ್ಥಾನಿ, ಉಬರಡ್ಕ ಮೋನಪ್ಪ ಮತ್ತು ಕೀರ್ತಿಕುಮಾರಿ ಯವರ ಪುತ್ರ ಉತ್ತಮ್ 101ಅಂಕ, ಬೀರಮಂಗಲದ ರಾಬರ್ಟ್ ಡಿಸೋಜ ಮತ್ತು ಪೌಲಿನ್ ಡಿಸೋಜ ರವರ ಪುತ್ರ ರೋಶನ್ ಡಿಸೋಜ 93 ಅಂಕ, ಜಾಲ್ಸೂರಿನವೇಣುಗೋಪಾಲ .ಜಿ ಮತ್ತು ಎ.ಕೆ ಚಂದ್ರಾವತಿಯವರ ಪುತ್ರಿ ಶೌರ್ಯಾ ವಿ 85 ಅಂಕ, ಬೀರಮಂಗಲ ಯೋಗೀಶ ಮತ್ತು ಉಷಾ ರವರ ಪುತ್ರಿ ಶ್ರೇಯಾ ಪಿ 78 ಅಂಕ ಪಡೆದಿದ್ದಾರೆ. ಇವರಿಗೆ ಜನಾರ್ದನ ಮಾಸ್ತರ್ ಗಣಿತ ಕೇಂದ್ರ ಸುಳ್ಯದ ವತಿಯಿಂದ ವಿಶೇಷ ತರಬೇತಿ ನೀಡಲಾಗಿತ್ತು.










