








ಸುಳ್ಯ ಹಳೆಗೇಟಿನ ವಿದ್ಯಾನಗದಲ್ಲಿರುವ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದ ಸಮಾಪನಾ ಹಾಗೂ ಶ್ರೀ ಕೇಶವ ಸ್ಮತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ.೧೮ರಂದು ಅಪರಾಹ್ನ ೩ ಗಂಟೆಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಶಿವಕೃಪಾ ಕಲಾಮಂದಿರದಲ್ಲಿ ನಡೆಯಲಿದೆ.
೨೦೨೫ನೇ ಸಾಲಿನ ಶ್ರೀ ಕೇಶವ ಸ್ಮತಿ ೨೦೨೫ ಪ್ರಶಸ್ತಿಗೆ ಅರಂಬೂರು ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ವೇದ ಅಧ್ಯಾಪಕರಾದ ಬ್ರಹ್ಮಶ್ರೀ ವೇ.ಮೂ. ವೆಂಕಟೇಶ ಶಾಸ್ತ್ರಿ, ಗ್ರೀನ್ ಹಿರೋ ಆಫ್ ಇಂಡಿಯಾ ಡಾ| ಆರ್.ಕೆ.ನಾಯರ್, ಸಂಗೀತ ಶಿಕ್ಷಕ ವಿದ್ವಾನ್ ಕಾಂಚನ ಈಶ್ವರ ಭಟ್ ಭಾಜನರಾಗಿದ್ದು ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಮಾರಂಭದಲ್ಲಿ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನೆ ನೀಡುವರು. ಬೆಂಗಳೂರು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಾದ ಡಾ| ಗಿರಿಧರ ಕಜೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ.
ಬೆಳಾಲು ಧ.ಮ. ಕಾಲೇಜು ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಅಭಿನಂದನಾ ಹಾಗೂ ಸಮಾಪನಾ ಭಾಷಣ ಮಾಡಲಿದ್ದಾರೆ.
ಸುಳ್ಯ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ವಗೆನಾಡು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ಸುಳ್ಯ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಪುರೋಹಿತ ನಾಗರಾಜ್ ಭಟ್ ತಿಳಿಸಿದ್ದಾರೆ.








