ಶ್ರಿ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ಮನೆಯಲ್ಲಿ ವರ್ಷಂಪ್ರತಿ ಜರುಗುವ ಶ್ರೀ ದೇವಿಯ ಶಕ್ತಿ ಪೂಜೆಯು ಮೇ.10 ರಂದು ನಡೆಯಿತು.










ಸಂಜೆ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು ರಾತ್ರಿಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯಾಯಿತು. ಶ್ರೀ ದೇವಿಯ ಪಾತ್ರಿ ಅಪ್ಪಯ್ಯ ಮಣಿಯಾಣಿ ಯವರ ನೇತೃತ್ವದಲ್ಲಿ ವಿಶೇಷವಾಗಿ ಶ್ರೀ ದೇವಿಯ ಶಕ್ತಿ ಪೂಜೆಯು ನೆರವೇರಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಆಗಮಿಸಿ ಪ್ರಸಾದ ಸ್ವೀಕರಿಸಿದರು.










