ಸುಳ್ಯದಲ್ಲಿ 3 ದಿನಗಳ ಮಹಾಮೇಳ ಆರಂಭ

0

ನಮ್ಮ ಸುಳ್ಯ ಮೇಳ -2025

ಸುಳ್ಯದ ಹಳೆಬಸ್‌ನಿಲ್ದಾಣದ ಬಳಿ ಇರುವ ಶಿವಕೃಪಾ ಕಲಾಮಂದಿರದಲ್ಲಿ ಮೇ. 23, 24, 25 ರಂದು ನಡೆಯಲಿದ್ದು, ಇಂದು ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸುಳ್ಯ ನ.ಪಂ, ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಇನ್ನರ್‌ವ್ಹೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ಶ್ರೀಮತಿ ಪೂಜಾ ಸಂತೋಷ್, ಗೌಡರ ಯುವ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸುದ್ದಿ ಕಚೇರಿಯ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ, ದೀಪಂ ಗೋಲ್ಡ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ದೀಪಂ ಗೋಲ್ಡ್‌ನ ಮಾಲಕಿ ಶ್ರೀಮತಿ ಸುಧಾ ಪ್ರಹ್ಲಾದ್ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.


ಮಹಾಮೇಳದಲ್ಲಿ ೧ ಗ್ರಾಂ ಗೋಲ್ಡ್‌ನ ಸಾಂಪ್ರದಾಯಿಕ ದೈನಂದಿನ ಆಭರಣಗಳು, ವಿವಿಧ ರೀತಿಯ ಸಾರಿಗಳು, ಕಾಟನ್ ಕುರ್ತ, ಚೂಡಿದಾರ್ ಸೆಟ್‌ಗಳು, ಪುರುಷರ ಮತ್ತು ಮಕ್ಕಳ ಸುಪ್ರಸಿದ್ಧ ಬ್ರಾಂಡ್‌ಗಳ ಉಡುಪುಗಳು, ಕಾಟನ್ ಬೆಡ್‌ಶೀಟ್‌ಗಳು, ಚೆನ್ನಪಟ್ಟಣ ಆಟಿಕೆಗಳು ಲಭ್ಯವಿದೆ.
ಗ್ರಾಹಕರಿಗೆ ಲಕ್ಕಿ ಡ್ರಾ ಮುಖಾಂತರ ಬಹುಮಾನ ಗೆಲ್ಲುವ ಅವಕಾಶವಿದೆ. ಹಳೆಯ ಕಾಂಜೀವರಂ ಸಿಲ್ಕ್ ಸೀರೆಗಳನ್ನು ತೆಗೆದುಕೊಳ್ಳಲಾಗುವುದು. ಅದರ ಮೌಲ್ಯದ ಹಣ ಸ್ಥಳದಲ್ಲಿಯೇ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.