ಅಶಕ್ತರಿಗೆ ಮನೆ ನಿರ್ಮಿಸಲು ಸಹಾಯ ಹಸ್ತ ಚಾಚಿದ ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ

0

ಹೊನ್ನೆಕಡ್ಪು ಬಳಿಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದ ಅಕ್ಷಯ್

ಹೊನ್ನೆಕಡ್ಪು ಎಂಬಲ್ಲಿ ಅಶಕ್ತರಾಗಿರುವ ಸೀತಮ್ಮ ಕುಟುಂಬಕ್ಕೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಕಾರ್ಯಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಯವರು ಸಹಾಯ ನೀಡುವ ಭರವಸೆ ನೀಡಿದ್ದಾರೆ.

ಮೇ. 22ರಂದು ಹೊನ್ನೆಕಡ್ಪು ಸೀತಮ್ಮರ ಮನೆಗೆ ಭೇಟಿ ನೀಡಿದ ಅಕ್ಷಯ್ ಕೆ.ಸಿಯವರು ಮನೆಯಯವರ ಶೋಚನೀಯ ಪರಿಸ್ಥಿತಿಯನ್ನು ಮನಗಂಡು ಈಗಾಗಲೇ ಪಂಚಾಂಗ ಕೆಲಸ ಆಗಿರುವ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಹೇಳಿದರು.

ಭೇಟಿಯ ಸಂದರ್ಭದಲ್ಲಿ ಮಿಥುನ್, ಸಾಯಿರಾಂ, ಭುವನ್, ಕೊರಗಪ್ಪ ನಾಯ್ಕ್, ಕುರುಂಬುಡೇಲು, ತೀರ್ಥರಾಮ ಗೌರಿಪುರಂ, ವಿಶ್ವನಾಥ ಮೋಟುಕಾನ, ಕೇಶವ ಗೌಡ ಹಾಗೂ ಮನೆಯವರಾದ ಸೀತಮ್ಮ, ಕು. ಚಿತ್ರಾವತಿ, ಕು. ಹರಿಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.