ವಿದ್ಯುತ್ ಆಘಾತ : ಪವರ್ ಮ್ಯಾನ್ ಆಸ್ಪತ್ರೆಗೆ

0

ಕಲ್ಲುಗುಂಡಿಯಲ್ಲಿ ನಡೆದ ಘಟನೆ

ಕರೆಂಟ್ ಲೈನ್ ಸರಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಘಟನೆ ಕಲ್ಲುಗುಂಡಿ ಸಂಪಾಜೆಯ ಕಡಪಾಲದಲ್ಲಿ ಇಂದು ಸಂಭವಿಸಿದೆ.
ಲೈನ್‌ಮ್ಯಾನ್ ನವೀನ್ ಡಿಸೋಜಾ ವಿದ್ಯುತ್ ಶಾಕ್‌ಗೊಳಗಾದ ವ್ಯಕ್ತಿ.


ಊರವರು ಸೇರಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ನೆರವಿಗೆ ಬಂದರು. ಸಮೃದ್ಧಿ ಮಾರ್ಟ್‌ನ ಆಂಬ್ಯುಲೆನ್ಸ್‌ನಲ್ಲಿ ಶರತ್‌ರವರು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದರು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.