ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಗೆ ಆಯೋಜಿಸಿದ್ದ ಸುಳ್ಯ -ಕಡಬ ವಲಯ ಮಟ್ಟದ ?ಸಭಾ ಕಾರ್ಯಕ್ರಮದ ನಿರ್ವಹಣೆ? ಸ್ಪರ್ಧೆಯಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಅತ್ಯತ್ತಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿವಿಧ ಕಾಲೇಜುಗಳಿಂದ ಬಂದಿದ್ದ ಸ್ವಯಂಸೇವಕರು ಸಭಾ ಕಾರ್ಯಕ್ರಮದ ನಿರ್ವಹಣೆ? ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡರು.

ಸ್ಪರ್ಧೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಸುಳ್ಯ-ಕಡಬ ವಲಯದ ಸಂಯೋಜಕರಾದ ಶ್ರೀಮತಿ ಆರತಿ ಕೆ ರವರು ಮಾತನಾಡಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುಂದುವರೆದರೆ ಯಶಸ್ಸು ಖಂಡಿತ ಸಾಧ್ಯ ಹಾಗೂ ಇದೊಂದು ವಿಭಿನ್ನ ರೀತಿಯ ಸ್ಪರ್ಧೆಯಾಗಿದ್ದು ಇಂತಹ ಸ್ಪರ್ಧೆಗಳ ಆಗತ್ಯತೆ ಹೆಚ್ಚಿದೆ ಎಂದು ಹೇಳಿದರು. ಸ್ಪರ್ಧೆಯಲ್ಲಿ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು, ಸುಬ್ರಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜು, ನೆಲ್ಯಾಡಿಯ ವಿಶ್ವ ವಿದ್ಯಾನಿಲಯ ಕಾಲೇಜು ಹಾಗೂ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜುಗಳು ಭಾಗವಹಿಸಿದ್ದವು.ತೀರ್ಪುಗಾರರಾಗಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ . ಉದಯಶಂಕರ ಹೆಚ್, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಧನರಾಜ ಕುಮಾರ್ ಬಿ. ಸಿ ಹಾಗೂ ಕಚೇರಿ ಸಿಬ್ಬಂಧಿ ಬಾಲಕೃಷ್ಣ ಪಿ. ಎಸ್ ಆಗಮಿಸಿದ್ದರು.
















ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಇವರು ವಹಿಸಿಕೊಂಡಿದ್ದರು. ಪ್ರಥಮ ಬಿ. ಕಾಮ್ ನ ಸ್ವಯಂ ಸೇವಕ ಯತೀಶ್ ಸ್ವಾಗತಿಸಿದರು, ಪ್ರಥಮ ಬಿ. ಏ ಯ ಅಮೃತ ವಂದಿಸಿದರು. ಪ್ರಥಮ ಬಿಸಿಎ ಯ ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ರಾಮಕೃಷ್ಣ ಕೆ ಎಸ್, ಡಾ. ಮೋನಿಶಾ ಕೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಉದಯ ಶಂಕರ್ ಹೆಚ್ ಉಪಸ್ಥಿತರಿದ್ದರು.










