ಎಣ್ಣೆ ಮಜಲು ಪಟೇಲ್ ಪುಟ್ಟಣ್ಣ ಗೌಡ ಮತ್ತು ಶ್ರೀಮತಿ ವಿಶಾಲಾಕ್ಷಿ ದಂಪತಿಗಳ 50ನೇ ವಿವಾಹ ವಾರ್ಷಿಕೋತ್ಸವ ಸಮಾರಂಭ
ಮೇ.21 ರಂದು ನಡೆಯಿತು.









ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ 8 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಾಕೆ ಮಾಧವ ಗೌಡ, ರೋಟರಿ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ್ ನಾಯರ್, ಪೆರಾಜೆ ಶಾಸ್ತ್ರಾವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಪಟೇಲ್ ಪುಟ್ಟಣ್ಣ ಗೌಡರ ಅಳಿಯ ಡಾ. ಕೇಶವ ಪಿ.ಕೆ, ಸಮಾರಂಭದಲ್ಲಿ ಮಕ್ಕಳು ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು. ಚಿಂತನ್ ಕೆ.ಆರ್, 616, ನಕಾಶ ಎಣ್ಣೆಮಜಲು 604,
ಯೋಗಿತಾ ಕಾರ್ಜ, 612 ,ವರ್ಷಾ ಸಂಪ್ಯಾಡಿ 601, ತೇಜಸ್ ಕಣ್ಕಲ್ 603, ಪ್ರಸಾದ್ ಕೆ.ಜಿ ಕುಂಬ್ರ 606,
ಹನಿ 613, ನಿಧಿ ಶೆಟ್ಟಿ 607 ಅವರನ್ನು ಸನ್ಮಾನಿಸಲಾಯಿತು.











