ವಿದ್ಯಾರ್ಥಿ ನಾಯಕನಾಗಿ ಶಾಶ್ವತ್ ಕೆ.ಎಲ್, ಕಾರ್ಯದರ್ಶಿಯಾಗಿ ಪ್ರಫುಲ್ಲ ಪಿ.ಆಯ್ಕೆ















ಕೆ.ವಿ.ಜಿ.ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇದರ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರ್ಕಾರದ ಚುನಾವಣೆ ಜೂ.10 ರಂದು ನಡೆಯಿತು.
ವಿದ್ಯಾರ್ಥಿ ನಾಯಕನಾಗಿ ಶಾಶ್ವತ್ ಕೆ.ಎಲ್, ಕಾರ್ಯದರ್ಶಿಯಾಗಿ ಪ್ರಫುಲ್ಲ ಪಿ, ಉಪನಾಯಕನಾಗಿ ಪ್ರಖ್ಯಾತ್ ಪಿ, ಕ್ರೀಡಾಮಂತ್ರಿಯಾಗಿ ಪುನೀತ್ ರಾಜ್ ಎಸ್ , ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ಸತೀಶ್ ಎಂ.ಪಿ., ಸ್ವಚ್ಛತಾ ಮತ್ತು ಆರೋಗ್ಯ ಮಂತ್ರಿಯಾಗಿ ಭವನ ಶಂಕರ, ನೀರಾವರಿ ಮತ್ತು ತೋಟಗಾರಿಕಾ ಮಂತ್ರಿಯಾಗಿ ಚವನ್ ಎ.ಡಿ, ಸಾಂಸ್ಕೃತಿಕ ಮಂತ್ರಿಯಾಗಿ ಕೀರ್ತಿ ಇವರು ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶಿಕ್ಷಕ ಬಾಲಕೃಷ್ಣ ಗೌಡ ಎನ್. ಇದ್ದರು



